ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೆನ್ನೈ ಪ್ರಖ್ಯಾತ ಸರ್ಕಾರಿ ಆಸ್ಪತ್ರೆಗೂ ರಾಜೀವ್ ಹೆಸರು (Chennai | General Hospital | Rajiv Gandhi | Karunanidhi)
Bookmark and Share Feedback Print
 
ನೆಹರೂ-ಗಾಂಧಿ ಕುಟುಂಬದ ಹೆಸರಿಗೆ ಮತ್ತೊಂದು ಕಟ್ಟಡ ಸೇರ್ಪಡೆ. ಏಷ್ಯಾದಲ್ಲೇ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿರುವ ಚೆನ್ನೈಯ ಸರಕಾರಿ ಆಸ್ಪತ್ರೆಗೆ ಇನ್ನು ಮುಂದೆ ರಾಜೀವ್ ಗಾಂಧಿ ಹೆಸರು!. ಇದನ್ನು ಘೋಷಿಸಿದ್ದಾರೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ.

ತಮಿಳುನಾಡು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಪೀಟರ್ ಅಲ್ಫೋನ್ಸ್ ಮಾಡಿದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಈ ವಿಷಯವನ್ನು ಘೋಷಿಸಿದರು.

ರಾಜೀವ್ ಗಾಂಧಿ ಅವರು 1991ರ ಮೇ ತಿಂಗಳಲ್ಲಿ ಆತ್ಮಹತ್ಯಾ ಬಾಂಬರ್‌ಗೆ ಬಲಿಯಾದ ಸಂದರ್ಭದಲ್ಲಿ ಅವರ ಮೃತದೇಹವನ್ನು ಜನರಲ್ ಆಸ್ಪತ್ರೆ ಎಂದೇ ಜನಜನಿತವಾಗಿರುವ ಈ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಹೀಗಾಗಿ ರಾಜೀವ್ ಹೆಸರಿಡಬೇಕೆಂದು ಅಲ್ಫೋನ್ಸ್ ಕೋರಿದ್ದರು.

ಈ ಆಸ್ಪತ್ರೆ 347 ವರ್ಷದಷ್ಟು ಹಳೆಯದು. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಎದುರು ದಿಕ್ಕಿನಲ್ಲಿರುವ ಈ ಆಸ್ಪತ್ರೆಯಲ್ಲಿ 2720 ಹಾಸಿಗೆಗಳ ವ್ಯವಸ್ಥೆಯಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ