ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ಫೋಸಿಸ್: ಇನ್‌ಕಮಿಂಗ್‌ಗಿಂತ ಔಟ್‌ಗೋಯಿಂಗೇ ಹೆಚ್ಚು! (Infosys | techies | Bangalore | IT)
Bookmark and Share Feedback Print
 
PR
PR
ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಕಂಪನಿಯಲ್ಲಿ ಒಳಬರುವವರಿಗಿಂತಲೂ ಹೊರ ಹೋಗುವವರ ಸಂಖ್ಯೆಯೇ ಏರಿಕೆಯಾಗಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ನೇಮಕಾತಿಯಾದ ಉದ್ಯೋಗಿಗಳಿಗಿಂತ, ಕಂಪನಿಯಿಂದ ಬಿಟ್ಟು ಹೋದವರ ಸಂಖ್ಯೆಯೇ ಅಧಿಕವಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಅವಧಿಯಲ್ಲಿ 11,067 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದರೂ, ಇದೇ ಅವಧಿಯಲ್ಲಿ ಬಿಟ್ಟು ಹೋದವರ ಸಂಖ್ಯೆ 5756 ಆಗಿದ್ದು, ಈ ಮೂಲಕ ಒಟ್ಟಾರೆ ನೇಮಕಾತಿ ಸಂಖ್ಯೆ 5,311 ಆದಂತಾಗಿದೆ. ಉಳಿದವು ಬದಲಿಯಷ್ಟೇ.

2009ರ ಇದೇ ಅವಧಿಯಲ್ಲಿ ವಲಸೆ ಹೋಗುವವರ ಸಂಖ್ಯೆ ಶೇ. 11.6 ರಷ್ಟಿತ್ತು. ಆದರೆ, 2010ರ ಕೊನೆಯ ಅವಧಿಗೆ ವಲಸೆ ಪ್ರಮಾಣ 17.5 ಕ್ಕೆ ಏರಿಕೆಯಾಗಿದೆ. 2010ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಟ್ಟುಹೋಗಿದ್ದ ಶೇ. 17.05 ರಷ್ಟು ಸಾಫ್ಟ್‌ವೇರ್ ಎಂಜಿನಿಯರ್‌ಗಳಲ್ಲಿ 0.4 ರಷ್ಟು ಮಂದಿ ಸೆಪ್ಟಂಬರ್ ತಿಂಗಳಲ್ಲಿ ಬಿಟ್ಟುಹೋಗಿದ್ದರೆ, ಉಳಿದ 17.01ರಷ್ಟು ಉದ್ಯೋಗಿಗಳು ವರ್ಷದ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಉದ್ಯೋಗ ತ್ಯಜಿಸಿದ್ದಾರೆ.

ಹೆಚ್ಚುವರಿ ಸೇರ್ಪಡೆಯೊಂದಿಗೆ ತೃತೀಯ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ ಇನ್ಫೋಸಿಸ್‌ನಲ್ಲಿರುವ ಒಟ್ಟು ಉದ್ಯೋಗಿಗಳ ಸಂಖ್ಯೆಯು 1,27,779. ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಇದು 1,09,882 ಆಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ