ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಂಗಳೂರಿನಲ್ಲಿ ನೀರಾ ಅಭಿವೃದ್ಧಿಗೆ ಪೈಲಟ್ ಯೋಜನೆ (Karnataka horticulture department | pilot plant | Mangalore | coconut palm juice)
Bookmark and Share Feedback Print
 
ನೀರಾ ಅಭಿವೃದ್ಧಿಗೆ ಸರಕಾರ ಹೊಸ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ. ರಾಜ್ಯದಾದ್ಯಂತ ನೈಸರ್ಗಿಕ ತೆಂಗಿನ ನೀರಾವನ್ನು ಆರೋಗ್ಯಕರ ಪಾನೀಯವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ತೋಟಗಾರಿಕಾ ಇಲಾಖೆಯು ಮಂಗಳೂರಿನಲ್ಲಿ ನೀರಾ ಅಭಿವೃದ್ಧಿ ಪೈಲಟ್ ಯೋಜನೆಯನ್ನು ಆರಂಭಿಸಲಿದೆ.

ಉದ್ದೇಶಿತ ನೀರಾ ಕೇಂದ್ರಕ್ಕೆ ಒಂದು ಕೋಟಿ ರೂ. ವೆಚ್ಚ ಆಗಲಿದ್ದು, ದಿನಂಪ್ರತಿ ಒಂದು ಸಾವಿರ ಲೀಟರು ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ ಎಂದು ರಾಜ್ಯ ತೋಟಗಾರಿಕಾ ನಿರ್ದೇಶಕ ಎನ್. ಜಯರಾಮ್ ತಿಳಿಸಿದ್ದಾರೆ.

WD
ರಾಜ್ಯ ಸರಕಾರದ ಅಧೀನಕ್ಕೊಳಪಟ್ಟ ರಕ್ಷಣಾ ಆಹಾರ ಸಂಶೋಧನಾಲಯ (ಡಿಎಫ್ಆರ್ಎಲ್) ಮತ್ತು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್ಐ) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ನೀರಾ ಅಭಿವೃದ್ಧಿ ಯೋಜನೆಗೆ ಬಳಸಲಾಗುತ್ತದೆ. ಮಂಗಳೂರಿನಲ್ಲಿ ಸಂಗ್ರಹಿಸಿದ ನೀರಾವನ್ನು ಮೈಸೂರಿನ ಪ್ರಯೋಗಾಲಯಕ್ಕೆ ಸಾಗಿಸಿ ಶುದ್ಧೀಕರಿಸಿ ಮಾರಾಟಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.

ಈ ಯೋಜನೆಗಾಗಿ ಮಂಗಳೂರು ಸಮೀಪದಲ್ಲಿ 29 ಎಕರೆಯಲ್ಲಿ ತೆಂಗು ಬೆಳೆಯಲಾಗಿದೆ. ಸೂರ್ಯೋದಯವಾಗುವ ಮೊದಲು ಸಂಗ್ರಹಿಸಿದ ನೀರಾವನ್ನು ಪ್ಯಾಶ್ಚರೀಕರಿಸಿದರೆ ಸುಮಾರು ಆರರಿಂದ ಒಂಬತ್ತು ತಿಂಗಳು ಕುಡಿಯಲು ಯೋಗ್ಯವಾಗಿರುತ್ತದೆ ಎಂದು ತೆಂಗಿನ ಬೆಲೆಗೆ ಸಂಬಂಧಿಸಿ ನಡೆದ ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರದ ಸಂದರ್ಭ ಜಯರಾಮ್ ತಿಳಿಸಿದರು.

ನೀರಾ ಅಭಿವೃದ್ದಿ ತಂತ್ರಜ್ಞಾನವನ್ನು ತೆಂಗು ಬೆಳೆಗಾರರಿಗೂ ವರ್ಗಾಹಿಸುವ ಇಚ್ಛೆ ವ್ಯಕ್ತಪಡಿಸಿದ ಅವರು, ಈಗಾಗಲೇ ಈ ಯೋಜನೆ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಜಾರಿಯಲ್ಲಿದೆ ಎಂದರು. ಹಲವು ಔಷಧೀಯ ಗುಣಗಳನ್ನು ಹೊಂದಿರುವ 200 ಎಂಎಲ್ ನೀರಾ ಪ್ಯಾಕೆಟ್‌ಗೆ ಐದು ರೂ. ನಿಗದಿ ಮಾಡುವ ಸಾಧ್ಯತೆ ಇದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ