ದೈನಂದಿನ ಆಹಾರ, ತರಕಾರಿ ಬೆಲೆ ಏರುತ್ತಿರುವ ಬೆನ್ನಲ್ಲೇ, ಫೆಬ್ರುವರಿ-ಮಾರ್ಚ್ ವೇಳೆಗೆ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಹಾಲು ಶೇಖರಣೆ, ಉತ್ಪನ್ನಗಳ ತಯಾರಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಫೆಬ್ರುವರಿ-ಮಾರ್ಚ್ ವೇಳೆಗೆ ಹಾಲಿನ ದರ ಏರಿಕೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಚರ್ಚೆ ನಡೆಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಕೆಎಂಎಫ್ ವತಿಯಿಂದ ಹತ್ತು ಹೊಸ ಹಾಲು ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಂದರ್ಭದಲ್ಲಿ ಅವರು ಈ ವಿಷಯ ಹೇಳಿದರು.
ದೇಶದಲ್ಲಿಯೇ ಪ್ರತಿಷ್ಠಿತ ಹಾಗೂ ವಿಶ್ವಾಸಾರ್ಹ ಹಾಲು ಉತ್ಪನ್ನಗಳ ಸಾಲಿನಲ್ಲಿ ನಂದಿನಿ ನಂ.1 ಸ್ಥಾನದಲ್ಲಿದೆ. ಪ್ರಸ್ತುತ 42 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, 80 ಲಕ್ಷ ಲೀಟರ್‌ಗೆ ಏರಿಸಲು ಸಂಕಲ್ಪ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.