ಉತ್ತಮ ಮಾನ್ಸೂನ್‌ನಿಂದಾಗಿ ದೇಶೀಯವಾಗಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆತಿರುವುದರಿಂದ 2010ರ ಡಿಸೆಂಬರ್ ತಿಂಗಳಲ್ಲಿ ಅಡುಗೆ ತೈಲದ ಆಮದು ಇಳಿಮುಖವಾಗುವಂತೆ ಮಾಡಿದೆ. ಇದು ಶೇ.4.4ರಷ್ಟು ಇಳಿಕೆ ಕಂಡು, ಡಿಸೆಂಬರ್ ತಿಂಗಳಲ್ಲಿ 7.52 ಲಕ್ಷ ಟನ್ ಅಡುಗೆ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. 2009ರ ಡಿಸೆಂಬರ್ ತಿಂಗಳಲ್ಲಿ 7.87 ಲಕ್ಷ ಟನ್ ಅಡುಗೆ ಎಣ್ಣೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು.