ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಾಡಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಿಗದಿತ ಕಾಲಾವಧಿಯೊಳಗೆ ಕರ್ನಾಟಕದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಭೂಮಿ ಮತ್ತು ಹಣವನ್ನು ರಾಜ್ಯ ಸರಕಾರ ನೀಡಬೇಕು ಎಂದು ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು. ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರಕಾರ ಶೇಕಡಾ 50ರಷ್ಟು ಹಣ ಮತ್ತು ಭೂಮಿ ನೀಡಬೇಕು ಎಂದು ಹೇಳಿದರು.
ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ರೈಲು ವೇಳಾಪಟ್ಟಿ:
ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ರೈಲು (ರೈಲುಸಂಖ್ಯೆ 16206) ಪ್ರತಿದಿನ ಬೆಳಿಗ್ಗೆ 6ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಕೆ.ಆರ್.ನಗರ. ಹೊಳೆನರಸೀಪುರ, ಹಾಸನ, ಅರಸೀಕೆರೆ, ಬೀರೂರು ಜಂಕ್ಷನ್, ತರಿಕೆರೆ, ಭದ್ರಾವತಿ ಮಾರ್ಗವಾಗಿ 11.55ಕ್ಕೆ ಶಿವಮೊಗ್ಗ ತಲುಪಲಿದೆ.
ಸಂಜೆ 4.40ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರಿಕೆರೆ, ಬೀರೂರು ಜಂಕ್ಷನ್. ಅರಸೀಕೆರೆ, ಹೊಳೆನರಸೀಪುರ, ಕೆ.ಆರ್.ನಗರ ಮಾರ್ಗವಾಗಿ ರಾತ್ರಿ 10-45ಕ್ಕೆ ಮೈಸೂರು ತಲುಪಲಿದೆ.
ಪ್ರಯಾಣ ದರ: ಮೈಸೂರು-ಶಿವಮೊಗ್ಗ; ಕೆ.ಆರ್.ನಗರ (19), ಹೊಳೆನರಸೀಪುರ (31), ಹಾಸನ (39), ಅರಸೀಕೆರೆ (49), ಬೀರೂರು (57), ತರಿಕೆರೆ (62), ಭದ್ರಾವತಿ (66), ಶಿವಮೊಗ್ಗ (69).