ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್ ಬೆಲೆ ಏರಿಸಿದ್ದು ಕಡಿಮೆಯಾಯಿತಂತೆ! (Petrol Price | IOC | Indian Oil Corporation | India Petrol Price | Crude Oil)
Bookmark and Share Feedback Print
 
ಪೆಟ್ರೋಲ್ ಬೆಲೆಯನ್ನು ಲೀಟರಿಗೆ 2.50 ರೂ. ಏರಿಕೆ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಈ ಬೆಲೆ ಏರಿಕೆಯೂ ಕಡಿಮೆಯಾಯಿತು. ಕನಿಷ್ಠ ರೂ. 3.72 ಆದರೂ ಏರಿಕೆಯಾಗಬೇಕಿತ್ತು ಎಂದು ಹೇಳಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಹೋಲಿಸಿದರೆ ಮತ್ತು ಅದಕ್ಕೆ ಅನುಗುಣವಾಗಿ ಕನಿಷ್ಠ 3.72 ರೂಪಾಯಿ ಏರಿಸಬೇಕಾಗುತ್ತದೆ. ಆದರೆ ಗ್ರಾಹಕರಿಗೆ ಒಂದಿಷ್ಟು ಹೊರೆ ಕಡಿಮೆಯಾಗಲಿ ಎಂಬ ಕಾರಣಕ್ಕೆ 2.50 ರೂ.ಗೆ ಸೀಮಿತಗೊಳಿಸಲಾಗಿದೆ ಎಂದು ಕಂಪನಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಲೂ ನಮಗೆ ಲೀಟರಿಗೆ 1.22 ರೂ. ನಷ್ಟವಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ ಐಒಸಿ. ಡಿಸೆಂಬರ್ 16ರಂದು ಕೂಡ ಲೀಟರಿಗೆ 4.90 ರೂ. ಏರಿಸಬೇಕಾಗಿತ್ತು. ಆದರೆ 2.96 ರೂ. ಮಾತ್ರ ಏರಿಸಿದ್ದೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಹೇಳಿಕೊಳ್ಳುತ್ತಿದೆ.

ಈಗ ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್ ಒಂದಕ್ಕೆ 87.83 ಡಾಲರಿನಿಂದ 92.31 ಡಾಲರಿಗೆ ಏರಿಕೆಯಾಗಿದೆ. 1 ಬ್ಯಾರೆಲ್ ಎಂದರೆ 117.35 ಲೀಟರ್.

ಇಲ್ಲಿ ಜನರಿಗೆ ಅರ್ಥವಾಗದ ಸಂಗತಿಯೆಂದರೆ, ಇದರಿಂದಾಗಿ ದಿನಕ್ಕೆ ನೂರೈವತ್ತು ಕೋಟಿ ರೂಪಾಯಿಯಷ್ಟು ನಷ್ಟವಾಗುತ್ತಿದೆ ಎಂದು ಹೇಳಿಕೊಳ್ಳುವ ಕಂಪನಿಯು, ಇಷ್ಟು ವರ್ಷ ಕಾಲ ಉಳಿಯುವುದಾದರೂ ಹೇಗೆ?
ಸಂಬಂಧಿತ ಮಾಹಿತಿ ಹುಡುಕಿ