ವಯಸ್ಕರಿಗಾಗಿ ಚಲನ ಚಿತ್ರ, ಟಿವಿ ಕಾರ್ಯಕ್ರಮಗಳೆಲ್ಲ ಆಯ್ತು, ಈಗ ಅದಕ್ಕಾಗಿಯೇ ಪ್ರತ್ಯೇಕ ತ್ರೀ-ಡಿ ಚಾನೆಲ್ ಬರಲಿದೆ. ಪ್ರಸಿದ್ಧ ಪುರುಷರ ನಿಯತಕಾಲಿಕೆ ಪೆಂಟ್‌ಹೌಸ್‌ನಿಂದ ಈ ವರ್ಷಾಂತ್ಯದೊಳಗೆ ಚಾನೆಲ್ ಚಾಲನೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಚಾನೆಲ್ ಪ್ರತೀ ಕಾರ್ಯಕ್ರಮಗಳೂ ವಯಸ್ಕರಿಗಾಗಿ ವಿಶಿಷ್ಟ ರೀತಿಯಲ್ಲಿ ಮತ್ತು ತ್ರೀಡಿ ಆಧಾರಿತವಾಗಿ ಮೂಡಿಬರಲಿದೆ. ಆ ಮೂಲಕ ಪ್ರಥಮ ತ್ರೀ-ಡಿ ಟಿವಿ ಎಂದು ಇತಿಹಾಸ ಸೃಷ್ಟಿಸಲಿದೆ.
ಕಳೆದ ಬೇಸಿಗೆಯಲ್ಲೇ ಕಾರ್ಯಕ್ರಮಗಳ ಚಿತ್ರೀಕರಣ ಯಶಸ್ವಿಯಾಗಿ ನಡೆದಿದ್ದು, ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ತ್ರೀ-ಡಿ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. 2011ರ ವರ್ಷಾಂತ್ಯದೊಳಗೆ ಪ್ರಸಾರ ಆರಂಭಿಸಲಿದೆ ಎಂದು ಫ್ರೆಂಡ್ ಫೈಡರ್ ನೆಟ್‌ವರ್ಕ್ ಸಿಇಒ ಮಾರ್ಕ್ ಬೆಲ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಅವತಾರ್ ಮತ್ತು ಹೌ ಟು ಟ್ರೈನ್ ಯುವರ್ ಡ್ರಾಗನ್ ಚಿತ್ರಗಳಿಂದ ತ್ರೀ-ಡಿ ಅಲೆ ಎಲ್ಲೆಂದರಲ್ಲಿ ಹಬ್ಬಿದೆ. ಅಂತೆಯೇ ತ್ರೀ-ಡಿ ಕನ್ನಡಕಗಳ ಬೇಡಿಕೆಯೂ ಏರಿದೆ. ವಿಶ್ವದ ಪ್ರಥಮ ತ್ರೀ-ಡಿ ವಯಸ್ಕರ ಚಿತ್ರ 'ತ್ರೀ-ಡಿ ಸೆಕ್ಸ್ ಎಂಡ್ ಝೆನ್' ಹಾಂಗ್ ಕಾಂಗ್‌ನಲ್ಲಿ ಚಿತ್ರೀಕರಣ ನಡೆದಿದ್ದು, ಈ ವರ್ಷ ಬಿಡುಗಡೆಗೆ ಕಾದಿದೆ.
ಆದರೆ, ತ್ರೀ-ಡಿ ಟಿವಿ ಉತ್ಪಾದಕರಿಂದ ತ್ರೀ-ಡಿ ಪ್ರೇಕ್ಷಕರನ್ನು ತೃಪ್ತಿಪಡಿಸಲು ಸಾಧ್ಯವಾಗಿಲ್ಲ. ತ್ರೀ-ಡಿ ಟಿವಿಯಲ್ಲಿ ಕಾರ್ಯಕ್ರಮ ನೋಡಲೂ ಪ್ರತ್ಯೇಕ ತ್ರೀ-ಡಿ ಕನ್ನಡಕ ಬಳಸಬೇಕಾದ್ದರಿಂದ, ಜನರು ತ್ರೀ-ಡಿ ಟಿವಿ ಖರೀದಿಯಲ್ಲಿ ಹಿಂದಿದ್ದಾರೆ. ಆದರೆ, ಪೆಂಟ್‌ಹೌಸ್‌ನ ಕಾರ್ಯಕ್ರಮಗಳ ವೈಖರಿಯಿಂದ ಭವಿಷ್ಯದಲ್ಲಿ ಸಾಮಾನ್ಯವಾಗಿಯೂ (ಕನ್ನಡಕ ರಹಿತವಾಗಿ) ವೀಕ್ಷಿಸಬಹುದಾದ ತ್ರೀ-ಡಿ ಟಿವಿ ಬೆಳಕಿಗೆ ಬರಲಿದೆ.