ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಉದ್ಯೋಗ ಖಾತ್ರಿ: ಹೆಚ್ಚುವರಿ ಹಣದ ಹೊಣೆ ರಾಜ್ಯಗಳದ್ದು (MGNREGA | Planning Commission | Central government | Montek Singh Ahluwalia)
Bookmark and Share Feedback Print
 
ಕೇಂದ್ರ ಸರಕಾರ ಜಾರಿಗೆ ತಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ, ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ವೇತನ ನೀಡುವ ಕುರಿತು ಕೇಂದ್ರವು ನಿಗದಿಪಡಿಸಿರುವ ಮಿತಿಯನ್ನು ದಾಟಿದಲ್ಲಿ, ಈ ಹೆಚ್ಚುವರಿ ಹಣವನ್ನು ರಾಜ್ಯ ಸರಕಾರ ಭರಿಸಬೇಕಾಗುತ್ತದೆ ಎಂದು ಯೋಜನಾ ಆಯೋಗ ತಿಳಿಸಿದೆ.

ಯಾವುದೇ ರಾಜ್ಯದ ಕನಿಷ್ಠ ವೇತನವು ಯೋಜನೆಯಲ್ಲಿ ನಿಗದಿ ಪಡಿಸಿದ್ದಕ್ಕೆ ಸಮೀಪ ಅಥವಾ ಸ್ವಲ್ಪ ಕೆಳಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹೆಚ್ಚು ಆದಾಯ ಹೊಂದಿರುವ ರಾಜ್ಯಗಳಲ್ಲಿ ಕನಿಷ್ಠ ವೇತನವೂ ಹೆಚ್ಚಿರುತ್ತದೆ, ಹೀಗಾಗಿ ಇಂತಹಾ ರಾಜ್ಯಗಳಿಗೆ ಕೇಂದ್ರ ಸರಕಾರದ ಮರುಪಾವತಿಯು ಸೀಮಿತವಾಗಿರುತ್ತದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎನ್ಆರ್ಇಜಿಎ ಯೋಜನೆಯಡಿ ನಿರುದ್ಯೋಗಿಯೊಬ್ಬ ವಾರ್ಷಿಕ ನೂರು ದಿನ ಉದ್ಯೋಗ ಮತ್ತು 100 ರೂ. ದಿನಗೂಲಿಗೆ ಅರ್ಹ ಎಂದು ನಿರ್ಧರಿಸಲಾಗಿತ್ತಾದರೂ, ಆ ಬಳಿಕ ಇದರ ವೇತನವನ್ನು ಹಣದುಬ್ಬರಕ್ಕೆ ಥಳಕು ಹಾಕಲಾಯಿತು.

ಹಣದುಬ್ಬರಕ್ಕೆ ಸಂಬಂಧ ಕಲ್ಪಿಸಿದ ನೂತನ ಪರಿಷ್ಕೃತ ವ್ಯವಸ್ಥೆಯಡಿ, ನೂರು ರೂಪಾಯಿ ಕನಿಷ್ಠ ವೇತನದೊಂದಿಗೆ ಶೇ.17ರಿಂದ 30ರಷ್ಟು ಏರಿಕೆಯಾಗಿ, ಸುಮಾರು ಐದು ಕೋಟಿ ಜನರು ಲಾಭ ಪಡೆಯುತ್ತಾರೆ. ಆದರೆ, ಕನಿಷ್ಠ ವೇತನವನ್ನು ಆಯಾ ರಾಜ್ಯಗಳು ನಿಗದಿಪಡಿಸುವುದರಿಂದ ಇದರ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.

ಅದರಂತೆ, ಒಂದು ವೇಳೆ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕನಿಷ್ಠ ದಿನಗೂಲಿ ಪ್ರಮಾಣವು ಮಹಾತ್ಮಗಾಂಧಿ ಯೋಜನೆಯಲ್ಲಿ ನಿಗದಿಪಡಿಸಿದ ದಿನಗೂಲಿಗಿಂತ ಅಧಿಕವಾಗಿದ್ದರೆ, ಆ ಹೆಚ್ಚುವರಿ ಹಣ ಪಾವತಿಯ ಸಂಪೂರ್ಣ ಹೊಣೆಗಾರಿಕೆ ರಾಜ್ಯ ಸರಕಾರದ್ದಾಗಿರುತ್ತದೆ ಎಂದಿದ್ದಾರೆ ಅಹ್ಲುವಾಲಿಯಾ.
ಸಂಬಂಧಿತ ಮಾಹಿತಿ ಹುಡುಕಿ