ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೈಕಲ್ ಕೊಳ್ತಿದ್ದೀರಾ? ಫೆ.1ರಿಂದ ಬೆಲೆ ಏರಿಕೆಯಾಗಲಿದೆ! (Bicycle | Hero Cycles | Avon | Safari Group)
Bookmark and Share Feedback Print
 
WD
ಈ ಪರಿಯಾಗಿ ಯದ್ವಾತದ್ವಾ ಪೆಟ್ರೋಲ್ ಬೆಲೆ ಏರುತ್ತಿದ್ದರೆ ಕಾರು, ಬೈಕೆಲ್ಲಾ ಬೇಡ ಅಂತ ಮೂಲೆಗೆ ಹಾಕಿ, ಸೈಕಲ್ಲು ಕೊಳ್ಳೋಣ, ಆರೋಗ್ಯಕ್ಕೂ ಒಳ್ಳೇದು ಅಂದುಕೊಂಡವರೇ, ತ್ವರೆ ಮಾಡಿ. ಫೆಬ್ರವರಿ ತಿಂಗಳಲ್ಲಿ ಈ ಬೈಸಿಕಲ್‌ಗಳ ಬೆಲೆಯೂ ಏರಿಕೆಯಾಗಲಿದೆ!.

ಉಕ್ಕು ಮತ್ತು ರಬ್ಬರ್ ಬೆಲೆಗಳು ಏರಿರುವುದರಿಂದ ಉತ್ಪಾದನಾ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಸೈಕಲ್ ಕಂಪನಿಗಳೂ ಈ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸಲು ನಿರ್ಧರಿಸಿದ್ದು, ಶೇ.5ರಿಂದ 7ರಷ್ಟು ಬೆಲೆ ಏರಿಕೆಯಾಗಲಿದೆ ಎಂದು ಲುಧಿಯಾನ ಮೂಲದ ಏವನ್ ಸೈಕಲ್ಸ್ ಕಂಪನಿಯ ಆಡಳಿತ ನಿರ್ದೇಶಕ ಓಂಕಾರ್ ಪಹ್ವಾ ತಿಳಿಸಿದ್ದಾರೆ.

ಏಕಾಏಕಿ ಸೈಕಲ್ ಬೆಲೆ ಏರಿಸುವುದಿಲ್ಲ. ಫೆಬ್ರವರಿ 1ರಿಂದ ತಲಾ ಸೈಕಲ್‌ಗೆ 60-65 ರೂಪಾಯಿ ಏರಿಸುತ್ತೇವೆ, ಇದೇ ರೀತಿ ಫೆಬ್ರವರಿ 15ರಿಂದಲೂ ಇದೇ ರೀತಿ ಬೆಲೆ ಏರಿಸುತ್ತೇವೆ ಎಂದು ಪಹ್ವಾ ತಿಳಿಸಿದ್ದಾರೆ.

ಇನ್ನೊಂದು ಸೈಕಲ್ ಸಂಸ್ಥೆ ಸಫಾರಿ ಗ್ರೂಪ್ ಕೂಡ ಸೈಕಲ್‌ಗಳಿಗೆ 65ರಿಂದ 100 ರೂಪಾಯಿಯಷ್ಟು ಏರಿಕೆ ಮಾಡಲು ನಿರ್ಧರಿಸಿದೆ ಎಂದು ಅದರ ಎಂಡಿ ಆರ್.ಡಿ.ಶರ್ಮಾ ಹೇಳಿದ್ದಾರೆ.

ಹೀರೋ ಸೈಕಲ್ಸ್ ಸಂಸ್ಥೆಯ ನಿರ್ದೇಶಕ ಎಸ್.ಕೆ.ರಾಯ್ ಕೂಡ, ಉತ್ಪಾದನಾ ವೆಚ್ಚ ವಿಪರೀತ ಏರಿಕೆ ಕಂಡಿದೆ ಎಂದಿದ್ದಾರಾದರೂ, ಎಷ್ಟನ್ನು ಗ್ರಾಹಕರಿಗೆ ಹೊರಿಸಬೇಕು ಎಂಬುದರ ಕುರಿತು ನಿರ್ಧಾರ ಮಾಡಿಲ್ಲವಂತೆ.

ಕಳೆದ ಒಂದು ತಿಂಗಳಲ್ಲಿ ಸೈಕಲ್ ತಯಾರಿಕೆಗೆ ಬೇಕಾಗಿರುವ ಉಕ್ಕಿನ ಬೆಲೆ ಕಿಲೋ ಒಂದಕ್ಕೆ 32ರಿಂದ 35 ರೂಪಾಯಿಯಷ್ಟು ಏರಿಕೆಯಾಗಿದೆ. ರಬ್ಬರ್ ಬೆಲೆಯೂ ಕಳೆದ ಮೂರು ತಿಂಗಳಲ್ಲಿ ಶೇ.25ರಷ್ಟು ಏರಿಕೆಯಾಗಿ ಕಿಲೋಗೆ 210 ರೂ.ಗೆ ತಲುಪಿದೆ. ಇದರೊಂದಿಗೆ ನಿಕೆಲ್, ತಾಮ್ರದ ಬೆಲೆಗಳೂ ಏರಿಕೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ