ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇದು ಸಾಧ್ಯ: ಟಾಯ್ಲೆಟ್ಟಿನಲ್ಲೇ ಆಟ, ಆರೋಗ್ಯ ತಪಾಸಣೆ!
(ToyLet | Toilet | Loo | Urinals | Games | High Tech Loo | Healh Checkup)
ಜಪಾನೀ ಟಾಯ್ಲೆಟ್‌ಗಳು ವಿಶಿಷ್ಟ ಶೈಲಿಗಳಿಗೆ ಈಗಾಗಲೇ ಖ್ಯಾತಿ ಪಡೆದವು. ಹಿಂಭಾಗದಿಂದ ಶವರ್ ಜೆಟ್‌ಗಳು ಮತ್ತು ಪರಿಮಳ ದ್ರವ್ಯಗಳ ಸಿಂಪಡಣೆ ಯಂತ್ರಗಳು... ಇವೆಲ್ಲ ಆದ ಬಳಿಕ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಇಲ್ಲಿನ ಟಾಯ್ಲೆಟ್‌ಗಳು Toy-Let ಗಳಾಗುವತ್ತ ಹೊರಟಿವೆ. ಅಂದರೆ ಜಪಾನಿನ ಮನರಂಜನಾ ಕಂಪೆನಿಯೊಂದು ಮೂತ್ರದಿಂದಲೇ ನಿಯಂತ್ರಿಸಲ್ಪಡುವ ಆಟಗಳನ್ನು ಟೋಕಿಯೋದ ಮೂತ್ರಾಲಯಗಳಲ್ಲಿ ಅಳವಡಿಸಲು ಹೊರಟಿದೆ!
ಟೋಕಿಯೋದ ಪಬ್‌ಗಳು ಮತ್ತು ಗೇಮ್ ಆರ್ಕೇಡ್‌ಗಳಲ್ಲಿರುವ ಪುರುಷರ ನಾಲ್ಕು ಸ್ನಾನಗೃಹ/ಮೂತ್ರಾಲಯಗಳಲ್ಲಿ ಪ್ರಯೋಗಾರ್ಥವಾಗಿ ಈ ಆಟಿಕೆಗಳನ್ನು ಅಳವಡಿಸಲಾಗಿದ್ದು, ಈ ತಿಂಗಳಾಂತ್ಯದವರೆಗೆ ಅವು ಲಭ್ಯವಿರುತ್ತವೆ. ನಾಲ್ಕು ವಿಧದ ಟಾಯ್-ಲೆಟ್ ಗೇಮ್‌ಗಳು ಲಭ್ಯವಿರುತ್ತವೆ.
ಪ್ರತೀ ಮೂತ್ರಾಗಾರದಲ್ಲಿ ಒಂದು ಪ್ರೆಶರ್ ಸೆನ್ಸರ್, ಕಣ್ಣಿನ ಮಟ್ಟದಲ್ಲಿ ಒಂದು ಪುಟ್ಟ ಡಿಜಿಟಲ್ ಪರದೆ ಅಳವಡಿಸಲಾಗಿರುತ್ತದೆ. ಗೇಮ್ ಮುಗಿದ ಬಳಿಕ ಡಿಜಿಟಲ್ ಜಾಹೀರಾತುಗಳು ಬರುತ್ತವೆ.
ಇವುಗಳಲ್ಲೊಂದು ಗೇಮ್ ಎಂದರೆ, ಗ್ರಾಫಿಟಿ ಇರೇಸರ್ ಅಂದರೆ ಚಿತ್ರ ಅಳಿಸುವ ಆಟ. ಪ್ರದರ್ಶನ ಪರದೆಯಲ್ಲಿರುವ ಕಾಲ್ಪನಿಕ ಚಿತ್ರವನ್ನು ಮೂತ್ರಾಲಯದಲ್ಲಿರುವ ಪ್ರೆಶರ್ ಸೆನ್ಸರ್ ಮೇಲೆ ಜೋರಾಗಿ ಮೂತ್ರ ಮಾಡುವ ಮೂಲಕ ಅಳಿಸಲು ಪ್ರಯತ್ನಿಸಬೇಕು.
ಅಥವಾ ಮನೆಕಿನ್ ಪಿಸ್ ಎಂಬ ಆಟದಲ್ಲಿ, ಈ ಗೇಮ್ಸ್‌ನ ಬಳಕೆದಾರ ಮಾಡುವ ಮೂತ್ರದ ಪ್ರಮಾಣ ಎಷ್ಟು ಎಂಬುದನ್ನು ಅಳೆದು ನೋಡಲಾಗುತ್ತದೆ.
ಮತ್ತೊಂದು ಆಟ, ದಿ ನಾರ್ತ್ ವಿಂಡ್ ಮತ್ತು ದಿ ಸನ್ ಆಂಡ್ ಮಿ. ಇದರಲ್ಲಿ ಕಾಲ್ಪನಿಕ ಪುಟಾಣಿಯೊಬ್ಬಳ ಲಂಗವು ಡಿಜಿಟಲ್ ಗಾಳಿಯ ಮೂಲಕ ಎಷ್ಟೆತ್ತರ ಹಾರುತ್ತದೆ ಎಂಬುದು ನಿರ್ಧಾರವಾಗುವುದು ಮೂತ್ರವನ್ನು ಎಷ್ಟು ಬಲವಾಗಿ ವಿಸರ್ಜಿಸಲಾಗುತ್ತದೆ ಎಂಬುದರ ಆಧಾರದ ಮೇಲೆ!
ಇನ್ನೊಂದು ಆಟ ಸ್ಪ್ಲಾಷಿಂಗ್ ಬ್ಯಾಟಲ್! ಇದು ಈ ಹಿಂದೆ ಮೂತ್ರ ಮಾಡಿದವರ ಜೊತೆ ಹೊಸ ಮೂತ್ರಿಗನನ್ನು ಪೈಪೋಟಿಗೆ ನಿಲ್ಲಿಸುತ್ತದೆ. ಹೇಗೆಂದರೆ, ಎಷ್ಟು ಜೋರಾಗಿ, ರಭಸವಾಗಿ ಮೂತ್ರ ಮಾಡುತ್ತಾರೆ ಎಂಬ ಆಧಾರದಲ್ಲಿ!
ಜಪಾನಿಗೆ ಮೊದಲ ಬಾರಿ ಭೇಟಿ ನೀಡುವವರು ಈ ರೀತಿಯ ಹೈಟೆಕ್ ಮೂತ್ರಾಲಯಕ್ಕೆ ಹೋಗುವಾಗ ತಬ್ಬಿಬ್ಬಾಗುವುದು ಸಹಜ. ಯಾಕೆಂದರೆ ಇಲ್ಲಿ ಈಗಾಗಲೇ ಕಂಪ್ಯೂಟರೀಕೃತ ನಿಯಂತ್ರಣ ಫಲಕಗಳು ಇರುತ್ತವೆ. ಇದರಲ್ಲಿ ಹೆಚ್ಚಾಗಿ ಜಪಾನೀ ಭಾಷೆಯ ಸೂಚನೆಗಳು, ಚಿತ್ರಗಳು ಇರುತ್ತವೆ.
ಈ ಜಪಾನ್ ಟಾಯ್ಲೆಟ್‌ಗಳು ಎಷ್ಟು ಮುಂದುವರಿದಿದ್ದಾವೆಂದರೆ, ಕೆಲವೆಡೆ ನೀವು ಪ್ರಕೃತಿಯ ಕರೆಗೆ ಓಗೊಟ್ಟ ತಕ್ಷಣವೇ ಆರೋಗ್ಯ ತಪಾಸಣೆಯೂ ನಡೆದುಹೋಗಿಬಿಡುತ್ತದೆ! ಇದರಲ್ಲಿ ಮೂತ್ರ ಪರೀಕ್ಷೆ, ರಕ್ತದೊತ್ತಡ ತಪಾಸಣೆ, ದೇಹದ ಉಷ್ಣತೆ ಪರೀಕ್ಷಿಸಲಿದ್ದು, ಒಳಗಿರುವ ತೂಕದ ಯಂತ್ರದಲ್ಲಿ ನಿಮ್ಮ ತೂಕವನ್ನೂ ಅಳೆಯಲಾಗುತ್ತದೆ.