ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅವಧಿಗೆ ಮೊದಲು ಠೇವಣಿ ವಾಪಸ್ ಪಡೆದ್ರೆ ದಂಡ ಶುಲ್ಕ (HDFC | FD withdrawal | RBI | Business | Bank)
Bookmark and Share Feedback Print
 
ಬಡ್ಡಿದರಗಳು ಇಳಿಯುತ್ತಿರುವಾಗ ಗೃಹ ಸಾಲದ ಕಂತು ಬೇಗನೇ (ಅವಧಿಪೂರ್ವ) ಪಾವತಿಸುವುದಕ್ಕೆ ಪ್ರೀಪೇಮೆಂಟ್ ಶುಲ್ಕ ನೀಡಬೇಕಾಗಿದ್ದರೆ, ನಿರಖು ಠೇವಣಿಯನ್ನು ನಿಗದಿತ ಅವಧಿಗಿಂತ ಮೊದಲು ನಗದೀಕರಿಸಿದರೆ, ಅದಕ್ಕೆ ದಂಡ ಶುಲ್ಕವನ್ನೂ ಕಟ್ಟಬೇಕಾಗಿ ಬಂದಿರುವುದು ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ.

ಇದುವರೆಗೆ ನಿರಖು ಠೇವಣಿಯ (ಫಿಕ್ಸೆಡ್ ಡಿಪಾಸಿಟ್) ಯನ್ನು ಅವಧಿಪೂರ್ವ ಹಿಂತೆಗೆದುಕೊಂಡರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಈ ಹಿಂದೆ ತಿಳಿಯಪಡಿಸಿದ್ದ ನಿಯಮವನ್ನು ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಈಗ ಬದಲಾಯಿಸಲಾಗಿದ್ದು, ಠೇವಣಿ ಹಿಂತೆಗೆದುಕೊಂಡಲ್ಲಿ ಶೇ.1ರ ದಂಡ ಶುಲ್ಕ ವಿಧಿಸಲಾಗುತ್ತದೆ. ಇದು ಜನವರಿ 24ರಿಂದ ಜಾರಿಗೆ ಬರಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮೂರನೇ ತ್ರೈಮಾಸಿಕ ಅವಧಿಗೆ ತನ್ನ ಹಣಕಾಸು ನೀತಿಯನ್ನು ಜನವರಿ 25ರಂದು ಪ್ರಕಟಿಸಲಿದ್ದು, ಆ ಸಂದರ್ಭದಲ್ಲಿ ಬಡ್ಡಿದರ ಹೆಚ್ಚಳಗೊಳಿಸುವ ನಿರೀಕ್ಷೆ ಇದೆ. ಬ್ಯಾಂಕ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಗ್ರಾಹಕರಿಗೆ ನೋಟೀಸು ಜಾರಿ ಮಾಡಿದ ಮೂವತ್ತು ದಿನದ ನಂತರ ಯಾವುದೇ ಬದಲಾವಣೆಯನ್ನು ಮಾಡುವ ಅಧಿಕಾರ ಬ್ಯಾಂಕ್‌ಗಿದೆ. ಹೀಗಾಗಿ, ಜನವರಿ 24ರವರೆಗೆ ಯಾವುದೇ ದಂಡ ಶುಲ್ಕವಿಲ್ಲದೆ ಠೇವಣಿ ವಾಪಸ್ ಪಡೆದುಕೊಳ್ಳುವ ಅವಕಾಶ ಇರುವುದರಿಂದ ಗ್ರಾಹಕರಿಗೆ ಯಾವುದೇ ನಷ್ಟವಿಲ್ಲ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಹಲವಾರು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಠೇವಣಿ ಹಿಂಪಡೆಯುವಿಕೆಗೆ ದಂಡ ವಿಧಿಸುತ್ತಿವೆ. ಆದರೆ ಆಕ್ಸಿಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮುಂತಾದ ಬ್ಯಾಂಕ್‌ಗಳು ತನ್ನ ಗ್ರಾಹಕರ ಮೇಲೆ ಯಾವುದೇ ಹಿಂಪಡೆಯುವಿಕೆಯ ಮೇಲೆ ದಂಡ ವಿಧಿಸುವುದಿಲ್ಲ ಎನ್ನುತ್ತಿವೆ. ಆದರೆ ಠೇವಣಿ ಹಿಂಪಡೆಯುವಿಕೆಯ ಸಂದರ್ಭದಲ್ಲಿ ನಿರಖು ಠೇವಣಿಯಲ್ಲಿ ನಿಗದಿಪಡಿಸಿದ್ದ ಅವಧಿಗೆ ಬಡ್ಡಿದರ ಇರುವುದಿಲ್ಲ, ಬದಲಾಗಿ ಠೇವಣಿ ಇರಿಸಿದ ಸಮಯಕ್ಕೆ ಅನುಗುಣವಾಗಿ ಬಡ್ಡಿ ದೊರೆಯುತ್ತದೆ ಎಂದು ಆಕ್ಸಿಸ್ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಸೋಮನಾಥ ಸೇನ್‌ಗುಪ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ