ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪರವೂರಿನ ಚೆಕ್‌ಗಳಿಗೆ ಸೇವಾ ಶುಲ್ಕ ಕಡಿತ (RBI | cheque | business | transaction)
Bookmark and Share Feedback Print
 
ಬೇರೆ ರಾಜ್ಯಗಳ ಚೆಕ್‌ಗಳನ್ನು ನಗದೀಕರಿಸಲು ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಕಡಿತ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಅದರಂತೆ ಪ್ರತೀ ಬ್ಯಾಂಕುಗಳು 5,000 ರೂ. ವರೆಗಿನ ಚೆಕ್‌ಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಕಡಿತಗೊಳಿಸಲು ಮತ್ತು ಒಂದು ಲಕ್ಷಕ್ಕಿಂತ ಮೇಲ್ಪಟ್ಟ ನಗದಿನ ಚೆಕ್‌ಗಳಿಗೆ ಹೆಚ್ಚಿನ ಶುಲ್ಕ ವಿಧಿಸಲು ಬುಧವಾರ ಸಂಜೆ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಆರ್‌ಬಿಐ ಅವಕಾಶ ನೀಡಿದೆ. ಏಪ್ರಿಲ್ ತಿಂಗಳಿನಿಂದ ಈ ನಿಯಮ ಜಾರಿಗೆ ಬರಲಿದೆ.

ಹೊಸ ಅನುಸೂಚಿಯಲ್ಲಿ ತಿಳಿಸಿರುವಂತೆ, 5,000 ರೂ. ಒಳಗಿನ ಮೊತ್ತದ ಹೊರ ರಾಜ್ಯದ ಚೆಕ್‌ನ ಸೇವಾ ಶುಲ್ಕವನ್ನು ಅರ್ಧಕ್ಕರ್ಧ ಇಳಿಸಲಾಗಿದ್ದು 25 ರೂ.ಗೆ ನಿಗದಿ ಮಾಡಲಾಗಿದೆ. ರೂ. 5,001 ರಿಂದ 10,000 ರೂ. ವರೆಗಿನ ಚೆಕ್‌ನ ಶುಲ್ಕ 50 ರೂಪಾಯಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಾಗೆಯೇ ರೂ. 10.001 ರಿಂದ ಒಂದು ಲಕ್ಷದವರೆಗಿನ ಚೆಕ್‌ಗಳಿಗೂ 100 ರೂ. ಸೇವಾ ಶುಲ್ಕ ಉಳಿಸಿಕೊಳ್ಳಲಾಗಿದೆ. ಮತ್ತು ಈ ಸೇವಾ ಶುಲ್ಕ ಅಂಚೆ ವೆಚ್ಚ, ಕೊರಿಯರ್ ವೆಚ್ಚ ಮತ್ತು ಇತರ ರಾಜ್ಯಗಳಿಗೆ ವರ್ಗಾಯಿಸಲು ತಗಲುವ ಸೇವಾವೆಚ್ಚವನ್ನು ಒಳಗೊಂಡಿರುತ್ತದೆ. ಒಂದು ಲಕ್ಷಕ್ಕಿಂತ ಮೇಲ್ಪಟ್ಟ ಮೊತ್ತದ ಚೆಕ್‌ಗಳಿಗೆ ಸೇವಾ ಶುಲ್ಕ ವಿಧಿಸಲು ಆಯಾ ಬ್ಯಾಂಕ್‌ಗಳಿಗೆ ಸೂಚಿತ ಅಧಿಕಾರವನ್ನು ಆರ್‌ಬಿಐ ನೀಡಿದೆ.

ಸದ್ಯಕ್ಕೆ, ಪ್ರತಿ ಚೆಕ್‌ಗೆ ಬ್ಯಾಂಕುಗಳು 150 ರೂ. ವಿಧಿಸಬಹುದಾಗಿದ್ದು, ತುರ್ತು ಸೇವೆಗಳಿಗೂ ಇದೇ ಶುಲ್ಕ ಅನ್ವಯವಾಗುತ್ತದೆ. ಒಂದು ವೇಳೆ ಸ್ಥಳೀಯ ಚೆಕ್‌ಗಳ ವ್ಯವಹಾರ ಆಗಿದ್ದರೆ ಪ್ರತೀ ಚೆಕ್‌ಗೆ 50 ಪೈಸೆ ಶುಲ್ಕ ಹೆಚ್ಚಿಸಲಾಗುತ್ತದೆ.

ಈ ಕ್ರಮಗಳಿಂದಾಗಿ ಹಣ ವರ್ಗಾವಣೆ ವ್ಯವಹಾರಕ್ಕೆ ಜನರು ಹೆಚ್ಚಾಗಿ ಎಲೆಕ್ಟ್ರಾನಿಕ್ ಸೇವೆಯನ್ನೇ ಮೊರೆ ಹೋಗಲು ಅನುಕೂಲ ಮಾಡಿಕೊಡಲಿದೆ. ಹಾಗೂ ಬ್ಯಾಂಕ್‌ನ ಎಲ್ಲಾ ವ್ಯವಹಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಸೇವಾ ಶುಲ್ಕ ವಿಧಿಸಬೇಕೇ ಹೊರತು ಶೇಕಡಾವಾರು ದರಗಳನ್ನಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಬಿಐ, ಚೆಕ್, ವಾಣಿಜ್ಯ