ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಲೆ ಇನ್ನೂ ಇಳಿದಿಲ್ಲ; ಹಣದುಬ್ಬರ ಕೊಂಚ ಇಳಿಕೆ (food inflation | commerce and industry ministry | Business | Onion)
Bookmark and Share Feedback Print
 
ಜನವರಿ 8ರ ವಾರಾಂತ್ಯಕ್ಕೆ ಆಹಾರ ಸಗಟು ಬೆಲೆ ಆಧಾರಿತ ಆಹಾರ ಹಣದುಬ್ಬರ ದರವು ಶೇ. 15.52 ಕ್ಕೆ ಇಳಿಕೆಯಾಗಿದ್ದರೂ, ಕಳೆದ ಒಂದು ವರ್ಷದ ಹಿಂದೆ ಹೋಲಿಸಿದರೆ ಈರುಳ್ಳಿ ಬೆಲೆಯಲ್ಲಿ ಶೇ. 100 ರಷ್ಟು ಮತ್ತು ಇತರ ತರಕಾರಿ ಬೆಲೆಯಲ್ಲಿ ಶೇ. 65 ರಷ್ಟು ಹೆಚ್ಚಳವು ಮುಂದುವರಿದಿರುವುದರಿಂದ ಜನತೆ ಪರದಾಡುವಂತಾಗಿದೆ.

ಐದು ವಾರಗಳ ಸತತ ಏರಿಕೆಯ ನಂತರ, ಜ.1ರಿಂದೀಚೆಗೆ ಶೇ. 16.91ರಷ್ಟಿದ್ದ ಆಹಾರ ಹಣದುಬ್ಬರ ದರವು ಎರಡನೇ ಬಾರಿ ಇಳಿಕೆಯಾಗುತ್ತಿದೆ. ಅದಕ್ಕೂ ಹಿಂದಿನ ಐದು ವಾರಗಳಲ್ಲಿ ಕಳೆದ 52 ವಾರಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಅಂದರೆ ಶೇ.18.32ಕ್ಕೆ ಹಣದುಬ್ಬರ ದರವು ಏರಿಕೆಯಾಗಿತ್ತು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ಹೊರತಂದಿರುವ ಸಗಟು ದರ ಸೂಚ್ಯಂಕ ವರದಿಯಲ್ಲಿ ತಿಳಿಸಲಾಗಿದೆ.

ಸಚಿವಾಲಯ ಹೊರಡಿಸಿರುವ ಅಂಕಿ-ಅಂಶದಲ್ಲಿ ತಿಳಿಸಿರುವಂತೆ ಪೆಟ್ರೋಲ್‌ನ ಸಗಟು ಬೆಲೆ ಶೇ. 25 ರಷ್ಟು ಮತ್ತು ಡೀಸೆಲ್ 14.71 ರಷ್ಟು ಸರದಿಯಾಗಿ ಏರಿಕೆಯಾಗಿರುವುದು ಹಣದುಬ್ಬದಲ್ಲಿ ಹೆಚ್ಚಿನ ಪರಿಣಾಮ ಬೀರಿದೆ. ಆದರೆ ಈ ಮಾಹಿತಿಯಲ್ಲಿ, ಇತ್ತೀಚೆಗೆ ಪೆಟ್ರೋಲ್ ಬೆಲೆಯು ಪ್ರತಿ ಲೀಟರಿಗೆ 2.50 ರೂ. ಏರಿಕೆಯಾಗಿರುವ ವಿಷಯವು ಒಳಗೊಂಡಿಲ್ಲ ಎಂಬುದು ಉಲ್ಲೇಖಾರ್ಹ.

ದಿನಬಳಕೆ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಸಂಬಂಧಿಸಿ ಎಲ್ಲಾ ದಿಕ್ಕಿನಿಂದ ಪ್ರಧಾನಿ ಮನಮೋಹನ ಸಿಂಗ್ ಮೇಲೆ ಒತ್ತಡ ಹೆಚ್ಚಾಗಿರುವಂತೆ, ಬೆಲೆ ಏರಿಕೆಯ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಹಣದುಬ್ಬರದ ದರ ಏರಿಕೆಗೆ ಕಾರಣವಾಗಿರುವ ಕೆಲವೊಂದು ಅಂಶಗಳ ಬಗ್ಗೆ ಪ್ರಧಾನಿ ಅಸಹಾಯಕತೆ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ