ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡೀಸೆಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ: ಜೈಪಾಲ್ ರೆಡ್ಡಿ (Diesel Price | Jaipal Reddy | Oil Companies | Excise | Custom | Oil Price)
Bookmark and Share Feedback Print
 
ನವದೆಹಲಿ: ಕಡಿಮೆ ದರದಲ್ಲಿ ಡೀಸೆಲ್ ಮಾರಾಟದಿಂದಾಗಿ ತಮಗೆ ಪ್ರತಿ ಲೀಟರಿಗೆ ಏಳು ರೂಪಾಯಿಯಷ್ಟು ನಷ್ಟವಾಗುತ್ತಿದೆ ಎಂದು ತೈಲ ವಿತರಣಾ ಕಂಪನಿಗಳು ಹೇಳುತ್ತಿರುವ ಹೊರತಾಗಿಯೂ, ಸದ್ಯಕ್ಕೆ ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ ಎಂದು ನೂತನ ಪೆಟ್ರೋಲಿಯಂ ಖಾತೆ ಸಚಿವ ಎಸ್.ಜೈಪಾಲ್‌ ರೆಡ್ಡಿ ತಿಳಿಸಿದ್ದಾರೆ.

ಹೊಸ ಖಾತೆಯ ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಬೆಲೆ ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದಿದ್ದಾರೆ.

2010ರ ಜೂನ್ ತಿಂಗಳಲ್ಲಿ ಪ್ರಸ್ತಾಪಿಸಿದಂತೆ ಡೀಸೆಲ್ ಬೆಲೆಯ ನಿಯಂತ್ರಣವನ್ನು ತೈಲ ಕಂಪನಿಗಳಿಗೇ ವಹಿಸುವ ನಿರ್ಧಾರದ ಕುರಿತು ಕೇಳಿದಾಗ, ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ರೀತಿಯ ದೀರ್ಘಾವಧಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ ಎಂದರಲ್ಲದೆ, ಏರಿಸಿರುವ ಪೆಟ್ರೋಲ್ ಬೆಲೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಣಕಾಸು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ಇಂಧನ ಮಾರುತ್ತಿರುವುದರಿಂದ ಸರಕಾರಿ ಸ್ವಾಮ್ಯದ ಮೂರು ತೈಲ ವಿತರಣಾ ಕಂಪನಿಗಳಿಗೆ 72 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಹೇಳಿದ ಅವರು, ಕಚ್ಚಾ ತೈಲ ಮೇಲಿನ ಸೀಮಾ ಸುಂಕ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ತನ್ನ ಸಚಿವಾಲಯವು ಹಣಕಾಸು ಸಚಿವಾಲಯದ ಮೇಲೆ ಒತ್ತಡ ತರಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ