ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೇಷನ್ ಕಾರ್ಡ್ ತೋರಿಸದಿದ್ದರೆ ಎಲ್‌ಪಿಜಿ ಇಲ್ಲ (LPG | Gas Cylinder | Ration Card in Karnataka | BPL | APL)
Bookmark and Share Feedback Print
 
WD
ನೀವು ಬಡತನ ರೇಖೆಗಿಂತ ಕೆಳಗಿರುವವರು (ಬಿಪಿಎಲ್) ಅಲ್ಲವಾಗಿದ್ದರೆ ನೀವಿದನ್ನು ತಿಳಿಯಲೇಬೇಕು. ಅಂದರೆ ಬಡತನ ರೇಖೆಯ ಮೇಲಿರುವವರಾಗಿದ್ದರೆ, ಎಲ್‌ಪಿಜಿ ಡೀಲರ್‌ಗೆ ನೀವು ರೇಷನ್ ಕಾರ್ಡ್‌ನ ಪ್ರತಿ ಮತ್ತು ವಿದ್ಯುತ್ ಮೀಟರ್ ಸಂಖ್ಯೆಯನ್ನು ನೀಡದೇ ಇದ್ದರೆ ನಿಮಗೆ ಅಡುಗೆ ಅನಿಲ ದೊರೆಯುವುದಿಲ್ಲ.

ರೇಷನ್ ಕಾರ್ಡ್ ಇಲ್ಲದೆಯೇ ಎಲ್‌ಪಿಜಿ ಕನೆಕ್ಷನ್ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ. ರಾಜ್ಯದಲ್ಲಿ ಅಕ್ರಮ ರೇಷನ್ ಕಾರ್ಡ್‌ಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಈ ರೀತಿಯ ಕ್ರಮಕ್ಕೆ ಮುಂದಾಗಿದೆ.

ಎಲ್‌ಪಿಜಿ ಪಡೆಯಬೇಕಿದ್ದರೆ ಅಗತ್ಯವಾಗಿ ತೋರಿಸಬೇಕಾದ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದು ಆಗಿರುವುದರಿಂದ ಈ ಅಡುಗೆ ಅನಿಲದ ಮಾರ್ಗವನ್ನು ಬಳಸಿದೆ ಇಲಾಖೆ. ಹತ್ತು ದಿನಗಳೊಳಗೆ ಎಲ್ಲ ಎಪಿಎಲ್ (ಬಡತನ ರೇಖೆಗಿಂತ ಮೇಲಿರುವ) ರೇಷನ್ ಕಾರ್ಡ್‌ದಾರರು ತಮ್ಮ ರೇಷನ್ ಕಾರ್ಡ್‌ನ ಜೆರಾಕ್ಸ್ ಪ್ರತಿ, ವಿದ್ಯುತ್ ಮೀಟರ್ ನಂಬರ್ ಮತ್ತು ಇತ್ತೀಚಿನ ವಿದ್ಯುತ್ ಬಿಲ್ ಪ್ರತಿಯನ್ನು ತಮ್ಮ ಅಡುಗೆ ಅನಿಲ ವಿತರಕರಿಗೆ ನೀಡಬೇಕಾಗುತ್ತದೆ. ಈ ರೀತಿ ಮಾಡದಿದ್ದರೆ ಅವರ ಕಾರ್ಡ್ ರದ್ದುಗೊಳಿಸಲಾಗುತ್ತದೆ ಮತ್ತು ಎಲ್‌ಪಿಜಿ ಪೂರೈಕೆಯನ್ನು ನಿಲ್ಲಿಸುವಂತೆಯೂ ವಿತರಕರಿಗೆ ಸೂಚಿಸಲಾಗುತ್ತದೆ. ಇದು ಸರಕಾರಿ ಸ್ವಾಮ್ಯದ ಸಬ್ಸಿಡಿ ದರದಲ್ಲಿ ದೊರೆಯುವ ಎಲ್‌ಪಿಜಿ ಕಂಪನಿಗಳಾದ ಎಚ್‌ಪಿ, ಇಂಡೇನ್ ಮತ್ತು ಭಾರತ್ ಪೆಟ್ರೋಲಿಯಂ ಅನಿಲ ಸಂಪರ್ಕಗಳಿಗೆ ಅನ್ವಯವಾಗುತ್ತದೆ.

ಯೋಜನಾ ಆಯೋಗದ ಪ್ರಕಾರ, ರಾಜ್ಯದಲ್ಲಿ ಸುಮಾರು 1.2 ಕೋಟಿ ಕುಟುಂಬಗಳಿವೆ. ಆದರೆ ಈಗಾಗಲೇ 1.55 ಕೋಟಿ ಕಾರ್ಡುಗಳ ವಿತರಣೆಯಾಗಿದೆ. ಇಷ್ಟಾದರೂ, ಇನ್ನೂ ರೇಷನ್ ಕಾರ್ಡ್ ಸಿಕ್ಕಿಲ್ಲ ಎಂದು ಅಲವತ್ತುಕೊಳ್ಳುವವರ ದೊಡ್ಡ ದಂಡೇ ಇದೆ. ಎಪಿಎಲ್ ಮತ್ತು ಬಿಪಿಎಲ್ ಎರಡೂ ಕಾರ್ಡುಗಳಿರುವ ಕುಟುಂಬಗಳೂ ಇವೆಯಂತೆ!
ಸಂಬಂಧಿತ ಮಾಹಿತಿ ಹುಡುಕಿ