ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಒಂದು ಮೊಬೈಲ್‌ನಲ್ಲಿ 3 ಸಿಮ್ - ಅಕಾಯ್ ಟ್ರಯೋ (Akai Trio | Electronics | Japan | mobile phone)
Bookmark and Share Feedback Print
 
ಜಪಾನ್ ಮೂಲದ ಪ್ರಸಿದ್ಧ ಎಲೆಕ್ಟ್ರಾನಿಕ್ ಕಂಪನಿ ಅಕಾಯ್, ಪ್ರಥಮ ಭಾರಿಗೆ ಭಾರತದಲ್ಲಿ ಏಕಕಾಲಕ್ಕೆ ಮೂರು ಸಿಮ್ ಬಳಸಬಹುದಾದಂತಹಾ ನೂತನ ಮೊಬೈಲ್‌ 'ಅಕಾಯ್ ಟ್ರಯೋ' ವನ್ನು ಪರಿಚಯಿಸಿದೆ. ಈ ಮೊದಲು ಇಂಟೆಕ್ಸ್ ಕಂಪನಿ ಇಂತಹ ಸೇವೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆಯಾದರೂ, ಅದು ಸಿಡಿಎಂಎನೊಂದಿಗೆ ಎರಡು ಜಿಎಸ್‌ಎಂ ಸಿಮ್ ಬಳಸುವಂತದ್ದಾಗಿತ್ತು. ಆದರೆ ಪ್ರಸ್ತುತ ಅಕಾಯ್ ಪರಿಚಯಿಸಿರುವ ಮೊಬೈಲ್‌ನಲ್ಲಿ ಮೂರು ಜಿಎಸ್ಎಂ ಸಿಮ್ ಬಳಸಬಹುದಾಗಿದೆ ಎಂದು ಅಕಾಯ್ ತಿಳಿಸಿದೆ.
PR
PR

ನೂತನ ಮೊಬೈಲ್ ಟ್ರಯೋನ ವೈಶಿಷ್ಟ್ಯಗಳು: ಎರಡು ಇಂಚಿನ ಪರದೆ, 1.3 ಮೆಗಾಪಿಕ್ಸೆಲ್ ಕೆಮರಾ, ಎಫ್ಎಂ ರೇಡಿಯೋ, ಆಡಿಯೋ-ವೀಡಿಯೋ ಪ್ಲೇಯರ್, ಬ್ಲೂಟೂತ್, ವ್ಯಾಪ್, ಜಿಪಿಆರ್ಎಸ್, ಟಾರ್ಚ್, ಕರೆ/ಸಂದೇಶ ನಿರ್ಬಂಧ ವ್ಯವಸ್ಥೆ, ಇ-ಬುಕ್ ರೀಡರ್ ಹಾಗೂ 8 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್‌ ಅವಕಾಶವನ್ನು ಟ್ರಯೋ ಹೊಂದಿದೆ.

400 ಗಂಟೆಗಳ ಸ್ಟ್ಯಾಂಡ್‌ಬೈ, ಸುಮಾರು ಐದು ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಇದರ ಬ್ಯಾಟರಿ ಹೊಂದಿರುತ್ತದೆ. ಇದರ ಬೆಲೆ 3,295 ರೂ. ಆಗಿದ್ದು, ಭಾರತದಾದ್ಯಂತ ಸುಮಾರು 15,000 ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ