ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದುಬೈಯಲ್ಲಿ ಕಾರುಗಳ ಸಂಖ್ಯೆ ಇಬ್ಬರಿಗೊಂದು! (Dubai RTA | Automobile | Business | Car)
Bookmark and Share Feedback Print
 
PTI
PTI
ಇತ್ತೀಚೆಗೆ ದುಬೈ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಹೊರಡಿಸಿರುವ 2010 ರ ವಾಹನ ಅಂಕಿ ಅಂಶಗಳ ಪ್ರಕಾರ, 1.9 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ದುಬೈಯಲ್ಲಿ ಸುಮಾರು ಒಂದು ದಶಲಕ್ಷಕ್ಕೂ ಅಧಿಕ ಕಾರುಗಳಿದ್ದು, ಇಬ್ಬರಿಗೆ ಒಂದು ಕಾರಿನಂತೆ ದುಬೈ ನಿವಾಸಿಗಳು ವಾಹನ ಹೊಂದಿದ್ದಾರೆ.

2009 ರಲ್ಲಿ ಲಘುವಾಹನ ಮತ್ತು ಮೋಟಾರು ಸೈಕಲ್‌ಗಳ ಒಟ್ಟಾರೆ ನೋಂದಣಿಗಳ ಪ್ರಮಾಣ 724,494 ಆಗಿದ್ದರೆ, 2010 ರಲ್ಲಿ ಇದರ ಸಂಖ್ಯೆ 914,320 ಕ್ಕೆ ಏರಿಕೆಯಾಗಿದೆ. ಅಂದರೆ ಶೇ. 29 ರಷ್ಟು ಹೆಚ್ಚುವರಿ ನೋಂದಣಿಯಾಗಿದೆ. 2009ನೇ ಸಾಲಿಗೆ ಹೋಲಿಸಿದರೆ 2010ರಲ್ಲಿ 189,826 ರಷ್ಟು ಲಘುವಾಹನ ಮತ್ತು ಮೋಟಾರು ಸೈಕಲ್‌ಗಳ ಹೆಚ್ಚುವರಿ ನೋಂದಣಿಯಾಗಿದೆ.

ಅದರಂತೆ ಲಘುವಾಹನಗಳ ನೋಂದಣಿ ಶೇ. 25.7ರಷ್ಟು ಹೆಚ್ಚಳವಾಗಿದ್ದರೆ, ಮೋಟಾರು ಸೈಕಲ್‌ ನೋಂದಣಿಯ ಹೆಚ್ಚಳವು ಶೇ. 52.5 ಆಗಿದೆ.

ಆದರೆ ದುಬೈನ ಒಟ್ಟಾರೆ ವಾಹನಗಳನ್ನು ಗಣನೆಗೆ ತೆಗೆದುಕೊಂಡಾಗ 2010 ರಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 10,31,961. ಮತ್ತು 2009 ರಲ್ಲಿ ಈ ಸಂಖ್ಯೆ 8,41,852 ಆಗಿದ್ದು, ಶೇಕಡಾವಾರು 22.6 ರಷ್ಟು ಹೆಚ್ಚುವರಿ ನೋಂದಣಿಯನ್ನು ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ