ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಂಗಳೂರು ಮೂಲಕ ಏರ್‌ಟೆಲ್ 3ಜಿ ಸೇವೆ ಆರಂಭ (Bharti Airtel | 3G Mobile | Bangalore | Technology)
Bookmark and Share Feedback Print
 
PTI
PTI
ಬೆಂಗಳೂರು ಮೂಲಕ ದೇಶದಲ್ಲಿ 3-ಜಿ ಸೇವೆ ಆರಂಭಿಸಿರುವುದಾಗಿ ಭಾರತದ ಅತಿದೊಡ್ಡ ಮೊಬೈಲ್ ಸೇವಾ ಕಂಪನಿ ಭಾರ್ತಿ ಏರ್‌ಟೆಲ್ ಇಂದು ಪ್ರಕಟಿಸಿದೆ. ಅದರಲ್ಲೂ ಏರ್‌ಟೆಲ್‌ನ ಇಂಟರ್‌ನೆಟ್‌ 3-ಜಿ ಸೇವೆಯನ್ನು ತನ್ನ ಅತಿದೊಡ್ಡ ಮಾರುಕಟ್ಟೆ ಇರುವ ಕರ್ನಾಟಕಕ್ಕೆ ಮೊದಲ ಬಾರಿಗೆ ಪರಿಚಯಿಸಿದೆ. ಅಲ್ಲದೆ 2011 ಮಾರ್ಚ್ ಒಳಗೆ ದೇಶದ ಹದಿಮೂರು 3-ಜಿ ಪರವಾನಗಿ ಕೇಂದ್ರಗಳಲ್ಲಿ ಸೇವೆ ಆರಂಭಿಸುವ ಗುರಿಹೊಂದಿದೆ.

ಬಳಕೆಯ ಸಮಯ ಮತ್ತು ಮಿತಿಯು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಏರ್‌ಟೆಲ್ 3-ಜಿ ದರಗಳಿವೆ. ಬಳಕೆದಾರರ ಬಳಕೆಯ ಮಿತಿ ದಾಟಿದಲ್ಲಿ ಎಚ್ಚರಿಕೆ ಸಂದೇಶಗಳು ಬರುವ ವ್ಯವಸ್ಥೆಯಿದೆ. ಈ ಮೂಲದ ದಿಢೀರ್ ಬಿಲ್‌ನ ಆಘಾತಕ್ಕೆ ಒಳಗಾಗಬೇಕಿಲ್ಲ ಎಂದಿದೆ ಏರ್‌ಟೆಲ್.

ಏರ್‌ಟೆಲ್ 3-ಜಿ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಹೊಸ ಯೋಜನೆಗಳನ್ನು ತಂದಿದೆ. ಕಡಿಮೆ ಹಾಗೂ ದೀರ್ಘಾವಧಿ ಬಳಕೆದಾರರಿಗೆ ತಕ್ಕುದಾದ, ಸಮಯ-ಆಧಾರಿತ ಬಳಕೆಯ ಯೋಜನೆಗಳೂ ಇಲ್ಲಿರುತ್ತವೆ.

ಭಾರ್ತಿ ಕಂಪನಿ 12,296 ಕೋಟಿ ಹಣ ಪಾವತಿಸಿ 3-ಜಿ ತರಂಗಾಂತರ ಪರವಾನಗಿ ಪಡೆದಿದ್ದು, ಅತೀ ವೇಗದಲ್ಲಿ ಸಂಪರ್ಕ ಸೇವೆ ಒದಗಿಸುವ ನಿಟ್ಟಿನಲ್ಲಿ ಎರಿಕ್‌ಸನ್, ನೋಕಿಯಾ ಸೈಮನ್ಸ್ ನೆಟ್‌ವರ್ಕ್, ಹ್ಯೂವೆ ಮುಂತಾದ ಸಂಪರ್ಕ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.

ವಿಶ್ವದಾದ್ಯಂತ ಹೈಸ್ಪೀಡ್ ಇಂಟರ್‌ನೆಟ್ ಮತ್ತು ಸಾಮಾಜಿಕ ತಾಣಗಳ ಬಳಕೆಯಿಂದ ಪ್ರೇರಿತವಾಗಿ ಡೇಟಾ ಟ್ರಾಫಿಕ್ ಹೆಚ್ಚಾಗಿದ್ದು, ಇದು ಧ್ವನಿಯ ಟ್ರಾಫಿಕ್ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಏರ್‌ಟೆಲ್ 3ಜಿ ಸೇವೆ ಆರಂಭಿಸಿರುವುದು ಹೊಸ ಶಕೆಯ ಉದಯವಾದಂತಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ್ ಕಪೂರ್ ತಿಳಿಸಿದ್ದಾರೆ.

ಮೊಬೈಲ್ ಬಳಕೆಯಲ್ಲಿ ವಿಶ್ವದ ಇತರ ರಾಷ್ಟ್ರಗಳಿಗಿಂತ ನಿಧಾನವಾಗಿಯಾದರೂ ಭಾರತವು ತ್ವರಿತವಾಗಿ ಬೆಳೆಯುದು ಜಾಗತಿಕ ಮಟ್ಟಕ್ಕೆ ಹೊಂದಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಇತರ ತಂತ್ರಜ್ಞಾನಕ್ಕೆ ಹೋಲಿಸಿದರೆ ಜನರು 3-ಜಿ ಸೇವೆಯನ್ನು ಬಹುಬೇಗನೇ ಅಪ್ಪಿಕೊಳ್ಳುತ್ತಾರೆ. ಆದ್ದರಿಂದ ಇನ್ನಷ್ಟು ಸಮೃದ್ಧವಾದ ಸೇವೆ ಒದಗಿಸುವ ಏರ್‌ಟೆಲ್‌ನ ಈ ಯಾನದಲ್ಲಿ ಜೊತೆಗೂಡುವಂತೆ ಈ ದೇಶದ 745 ದಶಲಕ್ಷ ಗ್ರಾಹಕರನ್ನು ನಾನು ಸ್ವಾಗತಿಸುತ್ತೇನೆ ಎಂಜು ಕಪೂರ್ ಹೇಳಿದರು.

ಏರ್‌ಟೆಲ್ 3ಜಿ ಸೇವೆಯ ಕುರಿತು ಹೆಚ್ಚಿನ ಮಾಹಿತಿಗಾಗಿ 12134 ಗೆ ಕರೆ ಮಾಡಬಹುದು ಅಥವಾ, 121 ಗೆ ‘3G HELP’ ಎಂದು ಎಸ್ಎಂಎಸ್ ಮಾಡಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ