ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೀರೋ ಹೋಂಡಾದಿಂದ ಹೋಂಡಾ ನಿರ್ಗಮನ ಹಾದಿ ಸುಗಮ (Honda exit | Japan | India | Business)
Bookmark and Share Feedback Print
 
PTI
PTI
ಜಪಾನಿನ ಹೋಂಡಾ ಮೋಟಾರ್ಸ್ ಕಂಪನಿಯೊಂದಿಗಿದ್ದ ಪರವಾನಗಿಯ ಅಂತಿಮ ಒಡಂಬಡಿಕೆಯನ್ನು ಮುಕ್ತಾಯಗೊಳಿಸಿರುವುದಾಗಿ ಹೀರೋ ಹೋಂಡಾ ಮೊಟಾರ್ಸ್ ತಿಳಿಸಿರುವುದರೊಂದಿಗೆ, ಹೀರೋ ಮತ್ತು ಹೋಂಡಾ ಕಂಪನಿಗಳ ಬೇರ್ಪಡುವಿಕೆಗೆ ಹಾದಿ ಸುಗಮವಾಗಿದೆ.

ಹೀರೋ ಗ್ರೂಪ್ ಜೊತೆಗೆ ಸೇರಿಕೊಂಡು ಹುಟ್ಟು ಹಾಕಲಾಗಿದ್ದ ಹೀರೋ ಹೋಂಡಾ ಮೋಟಾರ್ಸ್‌ನಿಂದ ಹೊರಬರಲು ಜಪಾನೀ ಕಂಪನಿಗೆ ಈ ಒಡಂಬಡಿಕೆ ಪೂರಕವಾಗಲಿದೆ.

ಹೀರೋ ಗ್ರೂಪ್‌ನಲ್ಲಿ ಜಪಾನೀ ಘಟಕದ ಶೇರುಗಳ ಮಾರಾಟ ಪ್ರಕ್ರಿಯೆ ಮುಕ್ತಾಯವಾದ ಬಳಿಕ, ಹೀರೋ ಹೋಂಡಾ ಕಂಪನಿಯು ಈಗಿರುವ ಮತ್ತು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಿರುವ ವಾಹನಗಳಿಗೆ ಈ ಒಡಂಬಡಿಕೆಯು ಅನ್ವಯವಾಗುತ್ತದೆ.

ಹೀರೋ ಮತ್ತು ಹೋಂಡಾ ಕಂಪನಿಗಳು ಜಂಟಿಯಾಗಿ 26 ವರ್ಷ ಸಹಭಾಗಿತ್ವ ಪೂರೈಸಿದ್ದು, ಹೀರೋ ಗ್ರೂಪ್ ಮತ್ತು ಹೋಂಡಾ ಮೊಟಾರ್ಸ್ ಕಂಪನಿ ತಲಾ ಶೇ. 26ರಷ್ಟು ಪಾಲು ಹೊಂದಿದ್ದವು. ಒಪ್ಪಂದದ ಅನುಸಾರ ಈಗ ಹೀರೋ ಗ್ರೂಪ್, ಹೋಂಡಾ ಮೋಟಾರ್ಸ್‌ನ ಶೇ.26 ಶೇರುಗಳನ್ನೂ ಖರೀದಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ