ಹಣದುಬ್ಬರ ಏರಿಕೆ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ನಡೆಸಿದ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಶೇ.0.25ರಷ್ಟು ರೆಪೋ ದರಗಳನ್ನು ಹೆಚ್ಚಳಗೊಳಿಸಿದ್ದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ರೆಪೋ ದರ ಇದೀಗ ಶೇ.6.50ಕ್ಕೆ ಏರಿಕೆಯಾಗಿದ್ದು, ರಿವರ್ಸ್ ರೆಪೋ ದರ ಶೇ.5.50ಕ್ಕೆ ಹೆಚ್ಚಳವಾಗಿದ್ದರಿಂದ ಬ್ಯಾಂಕ್ ಬಡ್ಡಿ ದರಗಳಲ್ಲಿ ಏರಿಕೆಯಾಗಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಆರ್ಥಿಕ ವೃದ್ಧಿ ದರ ಆರ್ಥಿಕ ವರ್ಷಾಂತ್ಯಕ್ಕೆ ಶೇ.8.5ಕ್ಕೆ ತಲುಪುವ ನಿರೀಕ್ಷೆಗಳಿವೆ. ಆದರೆ, ಸತತ ಹಣದುಬ್ಬರ ದರ ಏರಿಕೆ ಕಳವಳ ಮೂಡಿಸಿದೆ.ಹಣದುಬ್ಬರ ದರ ವರ್ಷಾಂತ್ಯಕ್ಕೆ ಶೇ.7ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಆತಂತ ವ್ಯಕ್ತಪಡಿಸಿದ್ದಾರೆ.
ಆಹಾರ ವಸ್ತುಗಳು ಹಾಗೂ ಇಂಧನ ದರಗಳ ಏರಿಕೆಯಿಂದಾಗಿ ಹಣದುಬ್ಬರ ದರ ಹೆಚ್ಚಳವಾಗುತ್ತಿದೆ. ರೆಪೋ ದರಗಳ ಏರಿಕೆಯಿಂದಾಗಿ ಹಣದುಬ್ಬರ ದರವನ್ನು ಕೆಲ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತದೆ.