ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಾಜ್ಯದಲ್ಲಿ ಭಾರ್ತಿ ಏರ್‌ಟೆಲ್‌ನಿಂದ 3ಜಿ ಸೇವೆ ಆರಂಭ (Bharti Airtel | Karnataka | 3G services | Reliance Communications | Tata Teleservices)
Bookmark and Share Feedback Print
 
PTI
ದೇಶದ ಖಾಸಗಿ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್, ಇದೀಗ ರಾಜ್ಯದಲ್ಲಿ 3ಜಿ ಸೇವೆಯನ್ನು ಆರಂಭಿಸಿದೆ. ಮಾರ್ಚ್ ಅಂತ್ಯದೊಳಗೆ ಇತರ ರಾಜ್ಯಗಳಲ್ಲಿ ಕೂಡಾ 3ಜಿ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

3ಜಿ ಸೇವೆಗಳಿಂದಾಗಿ ಬಳಕೆದಾರರು ಹೈ ಸ್ಪೀಡ್ ಇಂಟರ್‌ನೆಟ್, ವಿಡಿಯೋ ವೀಕ್ಷಣೆ, ವಿಡಿಯೋ ಕರೆಗಳು ಸೇರಿದಂತೆ ಇತರ ಮಲ್ಟಿ ಮೀಡಿಯಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಭಾರ್ತಿ ಏರ್‌ಟೆಲ್ ಕಂಪೆನಿ, ಕಳೆದ ವರ್ಷ ಸರಕಾರ ನಡೆಸಿದ 3ಜಿ ತರಂಗಾಂತರಗಳ ಹರಾಜಿನಲ್ಲಿ 22 ಟೆಲಿಕಾಂ ವೃತ್ತಗಳಲ್ಲಿ 13 ವೃತ್ತಗಳ ಬಿಡ್‌ಗಳಲ್ಲಿ ಜಯ ಸಾಧಿಸಿತ್ತು.

ಭಾರ್ತಿ ಏರ್‌ಟೆಲ್ ಸಂಸ್ಥೆ, ಗ್ರಾಹಕರಿಗೆ ಜಾಗತಿಕ ಮಟ್ಟದ ಸಂಪರ್ಕಗಳನ್ನು ಒದಗಿಸಲು ಶ್ರಮಿಸುತ್ತಿದೆ. 3ಜಿ ಸೇವೆಯಿಂದಾಗಿ ಗ್ರಾಹಕರಿಗೆ ಅತ್ಯಾಧುನಿಕ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಕಪೂರ್ ತಿಳಿಸಿದ್ದಾರೆ.

ಹೈ ಸ್ಪೀಡ್ ಇಂಟರ್‌ನೆಟ್ ಮತ್ತು ಸೋಶಿಯಲ್ ಅಂತರ್ಜಾಲ ತಾಣಗಳ ಬಳಕೆಯಿಂದಾಗಿ ಈಗಾಗಲೇ 3ಜಿ ಸೇವೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.ಮುಂಬರುವ ದಿನಗಳಲ್ಲಿ ಮತ್ತಷ್ಟು ವೇಗದ ಇಂಟರ್‌ನೆಟ್‌ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಇದರೊಂದಿಗೆ, ಭಾರ್ತಿ ಏರ್‌ಟೆಲ್ ಕಂಪೆನಿ 3ಜಿ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಟೆಲಿಕಾಂ ಕಂಪೆನಿಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಈಗಾಗಲೇ ರಿಲಯನ್ಸ್ ಕಮ್ಯೂನಿಕೇಶನ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಕಂಪೆನಿಗಳು 3ಜಿ ಸೇವೆಯನ್ನು ಆರಂಭಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ