ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈರುಳ್ಳಿ ದರ: ದೆಹಲಿ, ನಾಶಿಕ್‌ ಮಾರುಕಟ್ಟೆಗಳಲ್ಲಿ ದಾಖಲೆಯ ಕುಸಿತ (Onion prices | Delhi | Nashik | Wholesale Markets | Retail prices)
Bookmark and Share Feedback Print
 
PTI
ರಾಜಧಾನಿ ನವದೆಹಲಿಯಲ್ಲಿ ಈರುಳ್ಳಿ ಸರಬರಾಜಿನಲ್ಲಿ ಚೇತರಿಕೆ ಕಂಡಿದ್ದರಿಂದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ, ಪ್ರತಿ ಕೆಜಿಗೆ 5-20 ರೂಪಾಯಿಗಳಿಗೆ ಇಳಿಕೆ ಕಂಡಿದೆ. ಆದರೆ ರಿಟೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ದರ 40 ರೂಪಾಯಿಗಳಿಗೆ ಸ್ಥಿರವಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರದಲ್ಲಿ ಇಳಿಕೆಯಾಗಿದ್ದರೂ ರಿಟೇಲ್ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ದರ ಗಗನಕ್ಕೇರಿದೆ ಎಂದು ವರ್ತಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಿಟೇಲ್ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಇಳಿಕೆಯಾಗಲು ಕೆಲ ದಿನಗಳ ಅಗತ್ಯವಿದೆ ಎಂದು ಸಗಟು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಉತ್ಪನ್ನ ಮಂಡಳಿಯ ಮುಖ್ಯಸ್ಥ ಬ್ರಹ್ಮಾ ಯಾದವ್ ಮಾತನಾಡಿ, ಈರುಳ್ಳಿ ದರ ವೇಗವಾಗಿ ಇಳಿಕೆಯಾಗುತ್ತಿದೆ. ಮಾಸಾಂತ್ಯದ ವೇಳೆಗೆ ಸ್ಥಿರತೆ ಕಾಣಲಿದೆ ಎಂದು ತಿಳಿಸಿದ್ದಾರೆ.

ಅಜಾದ್‌ಪುರ್ ಮಾರುಕಟ್ಟೆಯಲ್ಲಿ ಇದೀಗ ಈರುಳ್ಳಿ ಸರಬರಾಜಿನ ಕೊರತೆಯಿಲ್ಲ. ಆದ್ದರಿಂದ ಈರುಳ್ಳಿ ದರದಲ್ಲಿ ಕುಸಿತವಾಗುತ್ತಿದೆ ಎಂದು ಹೇಳಿದ್ದಾರೆ.

ದಾಖಲೆಯ ಪ್ರಮಾಣದಲ್ಲಿ ಈರುಳ್ಳಿ ದರದಲ್ಲಿ ಇಳಿಕೆಯಾಗಿದ್ದರಿಂದ, ಈರುಳ್ಳಿ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದ ನಾಶಿಕ್‌ನ ಲಾಸಲ್‌ಗಾಂವ್ ಜಿಲ್ಲೆಯ ವರ್ತಕರು ಕೃಷಿ ಉತ್ಪನ್ನ ಮಂಡಳಿಯ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ