ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಸ್ರೋ, ಡಿಆರ್‌ಡಿಒ ಮೇಲಿನ ಅಮೆರಿಕ ನಿರ್ಬಂಧ ರದ್ದು (ISRO | DRDO | India | US | Startegic Partnership)
Bookmark and Share Feedback Print
 
ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯವಹಾರ ವೃದ್ಧಿ ಮತ್ತು ಭಾರತದೊಂದಿಗೆ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕವು ಡಿಆರ್‌ಡಿಒ ಮತ್ತು ಇಸ್ರೋ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಿಂತೆಗೆದುಕೊಂಡಿದೆ.

ಇದರೊಂದಿಗೆ 1998ರಲ್ಲಿ ಭಾರತವು ಪೋಖ್ರನ್ ಪರಮಾಣು ಪರೀಕ್ಷೆ ನಡೆಸಿದ ಬಳಿಕ ವಿಧಿಸಲಾಗಿದ್ದ ನಿರ್ಬಂಧಗಳನ್ನು 13 ವರ್ಷಗಳ ಬಳಿಕ ಹಿಂತೆಗೆದುಕೊಂಡಂತಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಭಾರತೀಯ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೆ ಉಭಯ-ಬಳಕೆಯ ವಸ್ತುಗಳ ರಫ್ತು ಮೇಲಿನ ನಿರ್ಬಂಧ ಇದೀಗ ರದ್ದಾಗಿದೆ.

2010ರ ನವೆಂಬರ್ 8ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾಗ ನಡೆದ ಒಪ್ಪಂದದಲ್ಲಿ ಘೋಷಣೆಯಾದಂತಹಾ ಕ್ರಮಗಳ ಅನುಷ್ಠಾನದ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದು ಭಾವಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ