ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2012ರಲ್ಲಿ ಶೇ.9ಕ್ಕಿಂತಲೂ ಹೆಚ್ಚು ಪ್ರಗತಿ ಗ್ಯಾರಂಟಿ: ರಾಷ್ಟ್ರಪತಿ
(India | Pratibha Patil | economic growth | 62nd Republic Day)
2012ರಲ್ಲಿ ಶೇ.9ಕ್ಕಿಂತಲೂ ಹೆಚ್ಚು ಪ್ರಗತಿ ಗ್ಯಾರಂಟಿ: ರಾಷ್ಟ್ರಪತಿ
ನವದೆಹಲಿ, ಬುಧವಾರ, 26 ಜನವರಿ 2011( 15:52 IST )
ಮುಂದಿನ ವರ್ಷ ಭಾರತವು ಶೇ.9ಕ್ಕಿಂತಲೂ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸುವ ಬಗ್ಗೆ ಸರಕಾರಕ್ಕೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿರುವ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್, ಆಹಾರ ವಸ್ತುಗಳ ಬೆಲೆಯೇರಿಕೆ ಸೇರಿದಂತೆ ತೀವ್ರವಾಗುತ್ತಿರುವ ಹಣದುಬ್ಬರ ಕಳವಳಕಾರಿ ಸಂಗತಿ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನಾವೀಗ ಆರ್ಥಿಕ ಹಿಂಜರಿತಕ್ಕಿಂದ ಮೊದಲಿನ ಮಟ್ಟಕ್ಕೆ ಮರಳುತ್ತಿದ್ದೇವೆ. ಮುಂದಿನ ವರ್ಷ ಶೇ.9ಕ್ಕಿಂತಲೂ ಹೆಚ್ಚಿನ ಆರ್ಥಿಕ ಪ್ರಗತಿ ನಮ್ಮದಾಗಲಿದೆ ಎನ್ನುವ ಭರವಸೆ ಸರಕಾರದ್ದು ಎಂದು 62ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಪ್ರಗತಿ ಪಥಕ್ಕೆ ಆರ್ಥಿಕ ಕ್ಷೇತ್ರದ ಎಲ್ಲಾ ವಿಭಾಗಗಳೂ ಕೊಡುಗೆ ನೀಡಲಿವೆ ಎಂದಿರುವ ಪ್ರತಿಭಾ ಪಾಟೀಲ್, ಜಾಗತಿಕ ಹಿಂಜರಿತದಂತಹ ಜಟಿಲ ಸಂದರ್ಭಗಳಲ್ಲೂ ಭಾರತದ ಅರ್ಥ ವ್ಯವಸ್ಥೆಯು ಪ್ರಶಂಸೆಯನ್ನು ಪಡೆಯುವಂತಹ ರೀತಿಯಲ್ಲಿತ್ತು ಎನ್ನುವುದನ್ನು ಒತ್ತಿ ಹೇಳಿದರು.
ಆದರೂ ದೇಶದಲ್ಲಿ ಬೆಲೆಯೇರಿಕೆಯು ತಾಂಡವವಾಡುತ್ತಿರುವುದು ಕಳವಳಕಾರಿ ವಿಚಾರ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಹಣದುಬ್ಬರ, ಅದರಲ್ಲೂ ಆಹಾರ ವಸ್ತುಗಳ ಬೆಲೆ ಒಂದು ಗಂಭೀರ ವಿಚಾರ ಎಂದು ಅವರು ತನ್ನ ಭಾಷಣದಲ್ಲಿ ತಿಳಿಸಿದ್ದಾರೆ.
ಆಹಾರ ಭದ್ರತೆ, ಕೃಷ್ಯುತ್ಪನ್ನ ಮತ್ತು ಗ್ರಾಮೀಣಾಭಿವೃದ್ಧಿಯ ಕಡೆ ಹೆಚ್ಚಿನ ಗಮನ ಹರಿಸುವುದು ಮತ್ತು ತಕ್ಷಣ ಅಗತ್ಯ ಕ್ರಮಗಳಿಗೆ ಮುಂದಾಗುವುದರಿಂದ ಮಾತ್ರ ಹಣದುಬ್ಬರವನ್ನು ನಿಯಂತ್ರಿಸುವುದು ಸಾಧ್ಯವಿದೆ ಎಂದೂ ಅವರು ಹೇಳಿದ್ದಾರೆ.