ವಿಶ್ವದ ತೈಲ ಬೇಡಿಕೆ ಪ್ರತಿನಿತ್ಯ ಹೆಚ್ಚಳವಾಗುತ್ತಿದೆ. ತೈಲ ಬೇಡಿಕೆ ಪ್ರಮಾಣವನ್ನು ಕಡಿತಗೊಳಿಸಲು ಜಾಗತಿಕವಾಗಿ ಹಲವಾರು ಪ್ರಯತ್ನಗಳು ಮುಂದುವರಿದಿವೆ. ವಿಶ್ವದ ಕಾರು ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ವೊಕ್ಸ್‌ವಾಗೆನ್, ಅಂತಹದೊಂದು ಪ್ರಯತ್ನದಲ್ಲಿ ಸಫಲವಾಗಿದೆ.
ಕತಾರ್‌ನಲ್ಲಿ ವೊಕ್ಸ್‌ವಾಗೆನ್ ಎಕ್ಸ್‌ಎಲ್ 1 ಮಾಡೆಲ್ ಕಾರಿನ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 100 ಕಿ.ಮೀ.ದೂರವನ್ನು ಕ್ರಮಿಸುತ್ತದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ವೊಕ್ಸ್‌ವಾಗೆನ್ ಕಂಪೆನಿಯ ಮೇಲ್ವಿಚಾರಕ ಮಂಡಳಿಯ ಮುಖ್ಯಸ್ಥರಾದ ಪ್ರೊಫೆಸರ್ ಡಾ.ಫೆರ್ಡಿನಾಂಡ್ ಪಿಯೆಚ್ ಮಾತನಾಡಿ, ಪ್ರತಿ ಲೀಟರ್‌ಗೆ 100 ಕಿ.ಮೀ ದೂರವನ್ನು ಕ್ರಮಿಸುವ ಕಾರನ್ನು, ಮಾರುಕಟ್ಟೆಗೆ ಬಿಡುಗಡೆ ಮಾಡುವ ಕನಸು ಇದೀಗ ನನಸಾಗುತ್ತಿದೆ. ಮುಂದಿನ ಎರಡು -ಮೂರು ವರ್ಷಗಳ ಅವಧಿಯಲ್ಲಿ ಕಾರುಗಳು ಮಾರುಕಟ್ಟೆಗೆ ಬರಲಿವೆ ಎಂದು ತಿಳಿಸಿದ್ದಾರೆ.
ಎಕ್ಸ್‌ಎಲ್ 1 ಮಾಡೆಲ್ ಕಾರು, ಎಲೆಕ್ಟ್ರಿಕ್ ಮೋಟಾರ್ ಮತ್ತು ಐಸಿ ಇಂಜಿನ್‌ನೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುವುದರಿಂದ ಪ್ರತಿ ಲೀಟರ್ ಪೆಟ್ರೋಲ್‌ಗೆ ಹೆಚ್ಚಿನ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಕಾರಿನಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಬ್ಯಾಟರಿಯನ್ನು ಮನೆಯಲ್ಲಿ ಕೂಡಾ ಚಾರ್ಜ್ ಮಾಡಬಹುದು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಮೋಟಾರ್ ಮತ್ತು ಐಸಿ ಇಂಜಿನ್ ಜಂಟಿಯಾಗಿ ಏಕಕಾಲಕ್ಕೆ ಕಾರ್ಯನಿರ್ವಹಿಸುವುದರಿಂದ,ಪ್ರತಿ ಲೀಟರ್‌ಗೆ 100 ಕಿ.ಮೀ.ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 160 ಕಿ.ಮೀ.