ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಗೃಹೋಪಕರಣ ವಸ್ತುಗಳ ದರ ಏರಿಕೆ ಸಾಧ್ಯತೆ (Samsung India | Malay Mukherjee | fridges | Essar Steel Business Group | AC)
Bookmark and Share Feedback Print
 
ಉಕ್ಕು ಮತ್ತು ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ,ಫ್ರಿಡ್ಜ್, ಏರ್‌ಕಂಡೀಶನರ್‌ ಸೇರಿದಂತೆ ಹಲವು ಗೃಹೋಪಕರಣ ವಸ್ತುಗಳ ದರಗಳು ಶೀಘ್ರದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

ಉಕ್ಕು ಮತ್ತು ವಿದ್ಯುತ್ ವಹಿವಾಟಿನ ಉದ್ಯಮ ಆಸ್ಟ್ರೇಲಿಯಾ ಮತ್ತು ದೆಹಲಿಯ ಹವಾಮಾನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಕಳೆದ 12 ತಿಂಗಳುಗಳ ಅವಧಿಯಲ್ಲಿ ಕೇವಲ ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ಮಾತ್ರ ಹೆಚ್ಚಳವಾಗಿಲ್ಲ. ಉಕ್ಕು ಮತ್ತು ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಕ್ರಮವಾಗಿ ಶೇ.17ರಿಂದ ಶೇ.66ರಷ್ಟು ಏರಿಕೆಯಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಚೀನಾ ಮತ್ತು ಭಾರತದಿಂದ ಅಡುಗೆ ಅನಿಲ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.ಆದರೆ, ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ ಪ್ರವಾಹ ಪ್ರಕೋಪದಿಂದಾಗಿ ಅಡುಗೆ ಅನಿಲದ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಡುಗೆ ಅನಿಲ ದರದಲ್ಲಿ ಶೇ.56ರಷ್ಟು ಹೆಚ್ಚಳವಾಗಿದೆ. ಉಕ್ಕು ಅದಿರು ದರದಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉಕ್ಕು ಉತ್ಪಾದನೆಯ ಕೊರತೆಯ ನಂತರ ಇದೀಗ ತಾಮ್ರ, ಅಲುಮಿನಿಯಂ ಉತ್ಪಾದನೆ ಕೂಡಾ ಕುಂಠಿತವಾಗಿದೆ.ಇದರಿಂದಾಗಿ ಈಗಾಗಲೇ ಉತ್ಪಾದನೆ ವೆಚ್ಚದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದರ ಹೆಚ್ಚಳವಾದಲ್ಲಿ ಭಾರತದಲ್ಲಿ ಕೂಾ ದರ ಏರಿಕೆಯ ಪ್ರಭಾವ ಉಂಟಾಗುತ್ತದೆ. ಉಕ್ಕು ಅದಿರು, ಅಡುಗೆ ಅನಿಲ ಮತ್ತು ಕಚ್ಚಾ ವಸ್ತುಗಳ ದರಗಳಲ್ಲಿ ಏರಿಕೆಯಾಗಿದೆ. ಉದ್ಯಮದ ಉಳುವಿಗಾಗಿ ದರ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ ಎಂದು ಎಸ್ಸಾರ್‌ ಸ್ಟೀಲ್ ಬಿಜಿನೆಸ್ ಗ್ರೂಪ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲಯ್ ಮುಖರ್ಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ