ಸತತ ಎರಡು ವಾರಗಳ ಕುಸಿತ ಕಂಡ ಆಹಾರ ಹಣದುಬ್ಬರ ದರ, ಈರುಳ್ಳಿ, ತರಕಾರಿ ದರಗಳ ಏರಿಕೆಯಿಂದಾಗಿ ಜನೆವರಿ 15ಕ್ಕೆ ವಾರಂತ್ಯಗೊಂಡಂತೆ ಶೇ.15.57ಕ್ಕೆ ಏರಿಕೆ ಕಂಡಿದೆ.
ಕಳೆದ ಜನೆವರಿ 8ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.15.52ಕ್ಕೆ ತಲುಪಿತ್ತು.
ಆಹಾರ ಹಣದುಬ್ಬರ ದರ ನಿರಂತರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ದರ ನಿಯಂತ್ರಣಕ್ಕಾಗಿ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಒತ್ತಡವನ್ನು ಎದುರಿಸುತ್ತಿದೆ. ಆಹಾರ ಹಣದುಬ್ಬರ ದರ ಕೈಗಾರಿಕೆ ಕ್ಷೇತ್ರದ ಮೇಲೆ ಕೂಡಾ ಪ್ರಭಾವ ಬೀರಿದ್ದರಿಂದ ಕೈಗಾರಿಕೆ ಕ್ಷೇತ್ರ 18 ತಿಂಗಳ ಶೇ.2.7ರಷ್ಟು ಕುಸಿತ ಕಂಡಿದೆ.
ಕೇಂದ್ರ ಸರಕಾರ ಆಹಾರ ಹಣದುಬ್ಬರ ದರ ನಿಯಂತ್ರಣಕ್ಕಾಗಿ ಈಗಾಗಲೇ ಈರುಳ್ಳಿ ರಫ್ತಿಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಶೇ.0.25ರಷ್ಟು ರೆಪೋ ದರಗಳನ್ನು ಹೆಚ್ಚಿಸಿದೆ
ವಾರ್ಷಿಕ ಆಧಾರದನ್ವಯ, ಪ್ರಸಕ್ತ ವಾರದ ಅವಧಿಯಲ್ಲಿ ತರಕಾರಿ ದರಗಳು ಶೇ.67.07ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.