ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್,ಡಿಸೆಂಬರ್‌ಗೆ ಮೂರನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.32.9ರಷ್ಟು ಏರಿಕೆಯಾಗಿ 1,087.83 ಕೋಟಿ ರೂಪಾಯಿಗಳಿಗೆ ತಲುಪಿದೆ.
ಬ್ಯಾಂಕ್‌ನ ಒಟ್ಟು ಆದಾಯ ಡಿಸೆಂಬರ್‌ಗೆ ತ್ರೈಮಾಸಿಕ ಅಂತ್ಯಗೊಂಡಂತೆ6,357.8 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ಆದಾಯ 4,933.9 ಕೋಟಿ ರೂಪಾಯಿಗಳಾಗಿತ್ತು.
ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಬಡ್ಡಿ ಆದಾಯದಲ್ಲಿ ಶೇ.24.9ರಷ್ಟು ಏರಿಕೆಯಾಗಿ 2,777 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಠೇವಣಿ ಸಂಗ್ರಹದಲ್ಲಿ ಹೆಚ್ಚಳ ಹಾಗೂ ಬಡ್ಡಿ ದರ ಏರಿಕೆಯ ಹಿನ್ನೆಲೆಯಲ್ಲಿ, ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯದಲ್ಲಿ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ ಪರೇಶ್ ಸುಖಥಾಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಂಬೈ ಶೇರುಪೇಟೆಯಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್ ಶೇರು ದರದಲ್ಲಿ ಶೇ.1.67ರಷ್ಟು ಏರಿಕೆಯಾಗಿದ್ದು 2,052.15 ರೂಪಾಯಿಗಳಿಗೆ ತಲುಪಿದೆ.