ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ (Rupee | Foreign exchange | Dollar)
Bookmark and Share Feedback Print
 
ಏಷ್ಯಾದ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ಚೇತರಿಕೆಯಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 13 ಪೈಸೆ ಇಳಿಕ ಕಂಡು 45.70 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ರಫ್ತು ವಹಿವಾಟುದಾರರು ಹಾಗೂ ಬ್ಯಾಂಕ್‌ಗಳಿಂದ ಡಾಲರ್ ಮಾರಾಟದಲ್ಲಿ ಏರಿಕೆಯಾಗಿದ್ದರಿಂದ ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 14 ಪೈಸೆ ಏರಿಕೆ ಕಂಡು 45.57/58 ರೂಪಾಯಿಗಳಿಗೆ ತಲುಪಿದೆ.

ಮಾಸಾಂತ್ಯದ ಹಿನ್ನೆಲೆಯಲ್ಲಿ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಚೇತರಿಕೆಯಾಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 36.44 ಪಾಯಿಂಟ್‌ಗಳ ಚೇತರಿಕೆ ಕಂಡು 18,720.87 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ