ವರ್ಷಾಂತ್ಯಕ್ಕೆ 30 ಲಕ್ಷ 3ಜಿ ಗ್ರಾಹಕರ ಸೇರ್ಪಡೆ ಗುರಿ:ಬಿಎಸ್‌ಎನ್‌ಎಲ್
ಮುಂಬೈ, ಶನಿವಾರ, 5 ಫೆಬ್ರವರಿ 2011( 12:20 IST )
PTI
ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್, ಮಾರ್ಚ್ ತಿಂಗಳ ವೇಳೆಗೆ 3ಜಿ ಮೊಬೈಲ್ ಗ್ರಾಹಕರ ಸಂಖ್ಯೆ 30 ಲಕ್ಷಕ್ಕೆ ತಲುಪಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 20 ಲಕ್ಷ ಗ್ರಾಹಕರ ಗುರಿಯನ್ನು ಹೊಂದಲಾಗಿದೆ ಎಂದು ಬಿಎಸ್‌ಎನ್‌ಎಲ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎನ್.ಕೆ.ಯಾದವ್ ತಿಳಿಸಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ 10 ಲಕ್ಷ ಗ್ರಾಹಕರು 3ಜಿ ಮೊಬೈಲ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿವರಣೆ ನೀಡಿದ್ದಾರೆ.
ಬಿಎಸ್‌ಎನ್‌ಎಲ್ ಸಂಸ್ಥೆ ದೇಶದಲ್ಲಿ ಮೊದಲ ಬಾರಿಗೆ 3ಜಿ ಮೊಬೈಲ್ ಸೇವೆಗಳನ್ನು ಬಿಡುಗಡೆ ಮಾಡಿದ್ದು, ನಾಲ್ಕು ವಲಯಗಳ 650 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
2ಜಿ ತರಂಗಾಂತರಗಳಿಂದ ಇದೀಗ 3ಜಿ ತರಂಗಾಂತರಗಳಿಂದ ಅತ್ಯಾಧುನಿಕ ಸೇವೆಯನ್ನು ಒದಗಿಸಲಾಗುತ್ತಿದೆ.ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸಲು ಬಿಎಸ್‌ಎನ್‌ಎಲ್ ಹಗಲಿರಳು ಶ್ರಮಿಸುತ್ತಿದೆ ಎಂದು ಯಾದವ್ ತಿಳಿಸಿದ್ದಾರೆ.