ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2ಜಿ ಹಂಚಿಕೆ ಹಗರಣ:ಡಿಬಿ ಗ್ರೂಪ್ಎಂಡಿ ಶಾಹೀದ್ ಬಲ್ವಾ ಬಂಧನ (Dynamix Balwas | Shahid Usman | 2G scam | A Raja)
2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಡೈನಾಮಿಕ್ಸ್ ಬಲ್ವಾಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಶಾಹೀದ್ ಉಸ್ಮಾನ್ ಬಲ್ವಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಉನ್ನತ ಮೂಲಗಳ ಪ್ರಕಾರ, ಬಲ್ವಾ ಅವರನ್ನು ಅವರ ಬಾಂದ್ರಾ ನಿವಾಸದಲ್ಲಿ ಬಂಧಿಸಲಾಗಿದ್ದು, ಇಂದು ಸಂಜೆ ನವದೆಹಲಿಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

2ಜಿ ತರಂಗಾಂತರ ಹಂಚಿಕೆ ಹಗರಣ ಅಪೆಕ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಎರಡು ದಿನ ಮೊದಲೇ ಬಲ್ವಾ ಅವರ ಬಂಧನವಾಗಿದ್ದು, ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾನ್ ಟೆಲಿಕಾಂ ಕಂಪೆನಿಯನ್ನು ಡಿಬಿ ರಿಯಲ್ಟಿ ಎಂದು ಹೆಸರು ಬದಲಾವಣೆ ಮಾಡಿದ್ದು, ಸ್ವಾನ್ ಕಂಪೆನಿಗೆ 13 ವೃತ್ತಗಳಲ್ಲಿ 2ಜಿ ಲೈಸೆನ್ಸ್ ಪಡೆಯಲು ಮಾಜಿ ಟೆಲಿಕಾಂ ಸಚಿವ ಎ.ರಾಜಾ ನೆರವಾಗಿದ್ದರು ಎಂದು ಆರೋಪಿಸಲಾಗಿದೆ. ಮುಂಬೈ ಮತ್ತು ದೆಹಲಿ ವಲಯದ 2ಜಿ ಲೈಸೆನ್ಸ್‌‌ನ್ನು 1,537 ಕೋಟಿ ರೂಪಾಯಿಗಳಿಗೆ ಪಡೆದಿತ್ತು.ಆದರೆ, ಕೇವಲ ಒಂದು ತಿಂಗಳೊಳಗಾಗಿ ಶೇ.45ರಷ್ಟು ಶೇರುಗಳನ್ನು ದುಬೈ ಮೂಲದ ಎಟಿಸಲಾಟ್ ಕಂಪೆನಿಗೆ 4,500 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿತ್ತು

ಮೂಲಗಳ ಪ್ರಕಾರ, ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರಿಗೆ 2ಜಿ ಹಂಚಿಕೆಯಲ್ಲಿನ ಭ್ರಷ್ಟಾಚಾರದ ಹಣವನ್ನು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ವರ್ಗಾಯಿಸುವ ಕಾರ್ಯದಲ್ಲಿ ಬಲ್ವಾ ನೆರವಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ