ಮಾರ್ಚ್ ಅಂತ್ಯಕ್ಕೆ ಹಣದುಬ್ಬರ ದರ ಶೇ.7ಕ್ಕೆ ಕುಸಿತ: ಪ್ರಣಬ್
ನವದೆಹಲಿ, ಮಂಗಳವಾರ, 15 ಫೆಬ್ರವರಿ 2011( 18:07 IST )
ಜನೆವರಿ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಇಳಿಕೆಯಾಗಿರುವುದು ಸಂತಸದ ಸಂಗತಿ. ಒಟ್ಟಾರೆ ಹಣದುಬ್ಬರ ದರ ಮಾರ್ಚ್ ತಿಂಗಳಾಂತ್ಯಕ್ಕೆ ಶೇ.7ಕ್ಕೆ ಇಳಿಕೆಯಾಗುವ ನಿರೀಕ್ಷೆಯುದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಅಗತ್ಯ ವಸ್ತುಗಳ ದರ ಇಳಿಕೆಯಿಂದಾಗಿ ಹಣದುಬ್ಬರ ದರದಲ್ಲಿ ಇಳಿಕೆಯಾಗಿದ್ದು,ಮಾರ್ಚ್ ಅಂತ್ಯದ ವೇಳೆಗೆ ಶೇ.7ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ.ಆದರೆ, ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಟ್ಟಾರೆ, ಜನೆವರಿ ತಿಂಗಳ ಅವಧಿಯಲ್ಲಿ ಶೇ.8.43ರಷ್ಟಿದ್ದ ಹಣದುಬ್ಬರ ದರ, ಇದೀಗ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.8.23ಕ್ಕೆ ಇಳಿಕೆಯಾಗಿದೆ.
ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಮಾತನಾಡಿ, ಜಾಗತಿಕ ಮಾರುಕಟ್ಟೆಗಳ ಬೆಳವಣಿಗೆಗಳ ಮೇಲೆ ಮುಂಬರುವ ತಿಂಗಳುಗಳ ಹಣದುಬ್ಬರ ದರ ಅವಲಂಬಿಸಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಗೋಧಿ ಮತ್ತು ಆಹಾರ ವಸ್ತುಗಳ ದರಗಳಲ್ಲಿ ಇಳಿಕೆಯಾಗುವ ಸೂಚನೆಗಳು ಕಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗವ ವಿಶ್ವಾಸವಿದೆ ಎಂದು ಹೇಳಿದ್ದಾರೆ.