ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಶ್ವದ ಮಾರುಕಟ್ಟೆಗಳಲ್ಲಿ ಭಾರತಕ್ಕೆ ಅಗ್ರಸ್ಥಾನ: ಒಬಾಮಾ (Emerging market | Obama | India | Lawmakers | Congress)
PTI
ವಿಶ್ವದಲ್ಲಿಯೇ ಭಾರತ ಮಹತ್ವದ ಉದಯೋನ್ಮುಖ ಮಾರುಕಟ್ಟೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಮೆರಿಕ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ವಿಶ್ವದ ಉದಯೋನ್ಮುಖ ರಾಷ್ಟ್ರಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದು, ಭಾರತೀಯ ಕಂಪೆನಿಗಳು ಅಮೆರಿಕದ ಕಂಪೆನಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿವೆ ಎಂದು ವಾರ್ಷಿಕ ಬಜೆಟ್ ಪ್ರಸ್ತಾವನೆ ಸಂದರ್ಭದಲ್ಲಿ ಒಬಾಮಾ ಹೇಳಿದ್ದಾರೆ.

ಕಳೆದ ನವೆಂಬರ್ ತಿಂಗಳ ಅವದಿಯಲ್ಲಿ ಬಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ,9.5 ಬಿಲಿಯನ್ ಡಾಲರ್ ವಹಿವಾಟು ಒಪ್ಪಂದಕ್ಕೆ ಸಹಿ ಹಾಕಿದ್ದರು.ಒಪ್ಪಂದದಿಂದಾಗಿ ಅಮೆರಿಕದಲ್ಲಿ 53,670 ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿಕೆ ನೀಡಿದ್ದರು.

ಸಾರ್ವಜನಿಕ ಹಾಗೂ ಖಾಸಗಿ ಕಂಪೆನಿಗಳ ವಹಿವಾಟಿನಿಂದಾಗಿ ಭಾರತ-ಅಮೆರಿಕ ಮಧ್ಯದ ವಹಿವಾಟು ಚೇತರಿಕೆಯತ್ತ ಸಾಗಿದೆ.ಇದರಿಂದಾಗಿ ಉಭಯ ದೇಶಗಳ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ವಿಶ್ವಾಸ ವ್ಯಕ್ತಪರಡಿಸಿದ್ದಾರೆ.
ಇವನ್ನೂ ಓದಿ