ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2ಜಿ ಹಗರಣ: ಅನಿಲ್ ಅಂಬಾನಿಗೆ ಸಿಬಿಐ ನೋಟಿಸ್ ಜಾರಿ (CBI | Anil Ambani | 2G scam | Shahid Balwa | Swan Telecom | Reliance Telecom)
PTI
2ಜಿ ತರಂಗಾಂತರ ಹಂಚಿಕೆ ಅವ್ಯವಹಾರಗಳ ಕುರಿತಂತೆ ತನಿಖೆ ನಡೆಸುತ್ತಿರುವ ಸಿಬಿಐ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಸ್ವಾನ್ ಟೆಲಿಕಾಂ ಕಂಪೆನಿಯ ಮುಖ್ಯಸ್ಥ ಶಾಹೀದ್ ಬಲ್ವಾ ಅವರೊಂದಿಗೆ ರಿಲಯನ್ಸ್ ಕಂಪೆನಿ ವಹಿವಾಟು ಹೊಂದಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಅಂಬಾನಿಯನ್ನು ಪ್ರಶ್ನಿಸಲು ಸಿಬಿಐ ನಿರ್ಧರಿಸಿದೆ.

ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಸಂಸ್ಥೆ ಕಾನೂನುಬಾಹಿರವಾಗಿ ಸ್ವಾನ್ ಟೆಲಿಕಾಂ ಕಂಪೆನಿಯಲ್ಲಿ ಶೇ.9.9ರಷ್ಟು ಈಕ್ವಿಟಿ ಶೇರುಗಳನ್ನು ಹೊಂದಿದೆ. ಆದರೆ, ತನಿಖಾಧಿಕಾರಿಗಳ ಆರೋಪಗಳನ್ನು ತಳ್ಳಿಹಾಕಿದ ರಿಲಯನ್ಸ್ ಟೆಲಿಕಾಂ, ಮಾರ್ಚ್ 2007ರಲ್ಲಿ 2ಜಿ ಲೈಸೆನ್ಸ್‌ ಪಡೆಯಲು ಅರ್ಜಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಕೂಡಾ ಶೇ.9.9ರಷ್ಟು ಶೇರುಗಳನ್ನು ಹೊಂದಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ, ಕೇಂದ್ರದ ಟೆಲಿಕಾಂ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೆ ಪಾಲಿಸುತ್ತಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ ಕಂಪೆನಿಯ ಅಧಿಕಾರಿಗಳು ಅವಸರದಲ್ಲಿ ಹೇಳಿಕೆ ನೀಡಿ, ಅನಿಲ್ ಅಂಬಾನಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ಜಾರಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇವನ್ನೂ ಓದಿ