ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ದರಗಳ ಏರಿಕೆ ಮಧ್ಯೆಯು ಜಿ-20 ಶೃಂಗಸಭೆ ಆರಂಭ (G-20 | Rising food prices | Finance Ministers | Pranab Mukherjee)
ಜಾಗತಿಕ ಮಟ್ಟದಲ್ಲಿ ಆಹಾರ ದರ ಏರಿಕೆ ಹಾಗೂ ಆರ್ಥಿಕ ಸಮಸ್ಯೆಗಳ ಪರಿಹಾರಗಳನ್ನು ಬಗೆಹರಿಸುವ ನಿಟ್ಟಿನಲ್ಲಿ, ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಿದೆ.

ಶೃಂಗ ಸಭೆಯಲ್ಲಿ ಭಾರತದ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಸೇರಿದಂತೆ, ಅಮೆರಿಕ, ಜಪಾನ್, ಜರ್ಮನಿ ಮತ್ತು ಚೀನಾ ದೇಶಗಳ ಹಣಕಾಸು ಸಚಿವರು ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕವಾಗಿ ಆಹಾರ ಧಾನ್ಯಗಳ ದರಗಳಲ್ಲಿ ಭಾರಿ ಏರಿಕೆಯಾಗಿ ಅಪಾಯಕರ ಮಟ್ಟವನ್ನು ತಲುಪಿದೆ. ಕಳೆದ ವರ್ಷದ ಜೂನ್ ತಿಂಗಳಿನಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 44 ಮಿಲಿಯನ್ ಜನತೆ ಬಡತನದತ್ತ ತಳ್ಳಲ್ಪಟ್ಟಿದ್ದಾರೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

ಜಾಗತಿಕ ಆಹಾರ ಸೂಚ್ಯಂಕ ದರ ಅಕ್ಟೋಬರ್ 2010ರಿಂದ ಜನೆವರಿ 2011ರವರೆಗೆ ಶೇ.15ರಷ್ಟು ಏರಿಕೆ ಕಂಡಿದೆ. ಇದೇ ಸಂದರ್ಭದಲ್ಲಿ ಜಾಗತಿಕ ಗೋಧಿ ದರದಲ್ಲಿ ದ್ವಿಗುಣವಾಗಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ