ರೈಲ್ವೆ ಬಜೆಟ್ ಜನಸಾಮಾನ್ಯರ ಪರವಾಗಿರಲಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರೈಲ್ವೆ ಬಜೆಟ್ ಮಂಡನೆಗಾಗಿ ಸಂಸತ್ತಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡು ಬಜೆಟ್ ರೂಪಿಸಲಾಗಿದೆ.ಬಜೆಟ್ ಜನಪರವಾಗಿದ್ದರಿಂದ ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದ್ದಾರೆ.
12 ತಡೆರಹಿತ ರೈಲುಗಳು ಸೇರಿದಂತೆ 100 ನೂತನ ರೈಲುಗಳನ್ನು ಘೋಷಿಸುವ ನಿರೀಕ್ಷೆಗಳಿದ್ದು, ಪ್ರಯಾಣ ದರದಲ್ಲಿ ಏರಿಕೆ ಘೋಷಿಸುವ ಸಾಧ್ಯತೆಗಳಿಲ್ಲ ಎದು ಮೂಲಗಳು ತಿಳಿಸಿವೆ.
2011-12ರ ರೈಲ್ವೆ ಬಜೆಟ್ ಇಂದು ಸಂಸತ್ತಿನಲ್ಲಿ ಮಂಡೆಯಾಗಲಿದ್ದು, ರೈಲ್ವೆ ಪ್ರಯಾಣಿಕರಿಗಾಗಿ ಪ್ರತಿ ದಿನ 50,000 ದಿಂದ 1ಲಕ್ಷ ಉಪಹಾರ ವ್ಯವಸ್ಥೆಯನ್ನು ರೈಲ್ವೆಯ ಉಪಹಾರ ವ್ಯವಸ್ಥೆ ವಿಭಾಗ ವಹಿಸಿಕೊಳ್ಳಲಿದೆ.
ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಎರಡು ತಿಂಗಳು ನಂತರ ವಿಧಾನಸಭೆ ಚುನಾವಣೆ ಎದುರಿಸಲಿದ್ದಾರೆ. ಆದ್ದರಿಂದ ಹೌರಾ ಮತ್ತು ಸೀಲ್ಡಾ ರೈಲ್ವೆ ಲಿಂಕ್ ಸೇರಿದಂತೆ ರಾಜ್ಯಕ್ಕೆ ಹೆಚ್ಚಿನ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.