2ಜಿ ತರಂಗಾಂತರ ಹಗರಣ ಹಂಚಿಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ, ಟಾಟಾ ಟೆಲಿಸರ್ವಿಸಸ್ ಕಂಪೆನಿಯ ನಿರ್ದೇಶಕ ಅನಿಲ್‌ಕುಮಾರ್ ಸರಡಾನಾ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಟಾ ಗ್ರೂಪ್‌ನ ರಿಯಲ್ಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ವಿಭಾಗದ ಮುಖ್ಯಸ್ಥ ಆರ್.ಕೃಷ್ಣನ್ ಹಾಗೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಉಬಾಲೆಯವರನ್ನು 2ಜಿ ತರಂಗಾಂತರಗಳ ಹಂಚಿಕೆ ಅವ್ಯವಹಾರ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.
ಯುನಿಟೆಕ್ ಕಂಪೆನಿಯೊಂದಿಗಿನ ವಹಿವಾಟು ಸಂಪರ್ಕಗಳಿಂದಾಗಿ ಟಾಟಾ ಕಂಪೆನಿಯ ಸಿಇಒ ಉಬಾಲೆಯವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಯುನಿಟೆಕ್ ಕಂಪೆನಿ 2ಜಿ ಲೈಸೆನ್ಸ್ ಪಡೆದ ನಂತರ ನಾರ್ವೆ ಮೂಲದ ಟೆಲೆನಾರ್ ಕಂಪೆನಿಗೆ ಬೃಹತ್ ಶೇರುಗಳನ್ನು ವರ್ಗಾವಣೆ ಮಾಡಿರುವ ಕುರಿತಂತೆ ಮುಖ್ಯಸ್ಥ ಸಂಜಯ್ ಚಂದ್ರ ಅವರನ್ನು ಸಿಬಿಐ ಈಗಾಗಲೇ ವಿಚಾರಣೆ ನಡೆಸಿದೆ.