ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2011-12ರ ವೇಳೆಗೆ ಜಿಡಿಪಿ ದರ ಶೇ.9ಕ್ಕೆ ಏರಿಕೆ: ಪ್ರಣಬ್ (India economy | Pranab Mukherjee | Budget | Financial year)
PTI
ಭಾರತದ ಆರ್ಥಿಕ ವೃದ್ಧಿ ದರ ಮುಂದಿನ ಆರ್ಥಿಕ ವರ್ಷಾಂತ್ಯಕ್ಕೆ ಶೇ.9ಕ್ಕೆ ತಲುಪುವ ನಿರೀಕ್ಷೆಗಳಿವೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

2011-12ರ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ (+/-) ಶೇ.0.25ರಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು 2011-12ರ ಬಜೆಟ್ ಪ್ರಸ್ತಾವನೆಯನ್ನು ಮಂಡಿಸುವ ಸಂದರ್ಭದಲ್ಲಿ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತ ಬಿಕ್ಕಟ್ಟಿಗಿಂತ ಪೂರ್ವದಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇ.9ಕ್ಕೆ ತಲುಪಿತ್ತು.ಆದರೆ, ಇದೀಗ ಬೇಡಿಕೆ ಮತ್ತು ಪೂರೈಕೆ ಎರಡರಲ್ಲಿ ಕೂಡಾ ಸಮತೋಲನವನ್ನು ಹೊಂದುವುದು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ದೇಶದ ಜಿಡಿಪಿ ದರ ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳ ಅವಧಿಯಲ್ಲಿ, ಈಗಾಗಲೇ ಶೇ.8.9ಕ್ಕೆ ತಲುಪಿದೆ ಎಂದು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಇವನ್ನೂ ಓದಿ