ಕಡಿಮೆ ವೆಚ್ಚದ ಗೃಹ ಸಾಲಕ್ಕೆ(ಗರಿಷ್ಠ 15 ಲಕ್ಷ ರೂಪಾಯಿ) ಶೇ.1ರಷ್ಟು ಬಡ್ಡಿ ದರ ಅನುದಾನ ಘೋಷಿಸಿದ್ದರಿಂದ, ಗೃಹ ಕ್ಷೇತ್ರದ ಬೇಡಿಕೆಯಲ್ಲಿ ಹೆಚ್ಚಳವಾಗಬಹುದಾಗಿದೆ ಎಂದು ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಬಜೆಟ್ ಸಂದರ್ಭದಲ್ಲಿ ಮಾತನಾಡಿದ ಸಚಿವ ಮುಖರ್ಜಿ, ಪ್ರಸಕ್ತವಿರುವ ಯೋಜನೆಯನ್ನು ಸರಳೀಕರಣಗೊಳಿಸಿ ಗೃಹ ಸಾಲದ ವೆಚ್ಚ ಯಾವುದೇ ಕಾರಣಕ್ಕೂ 25 ಲಕ್ಷವನ್ನು ಮೀರದ15 ಲಕ್ಷ ರೂಪಾಯಿಗಳಿಗಿಂತ ಕಡಿಮೆ ವೆಚ್ಚದ ಗೃಹ ನಿರ್ಮಾಣಕ್ಕೆ ಶೇ.1ರಷ್ಟು ಬಡ್ಡಿ ದರ ಅನುದಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 20 ಲಕ್ಷ ಮೀರದ ಗೃಹನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಸಾಲಕ್ಕೆ ಬಡ್ಡಿ ದರ ಅನುದಾನವನ್ನು ನೀಡಲಾಗುತ್ತದೆ ಎಂದು ಸಚಿವ ಮುಖರ್ಜಿ ಹೇಳಿದ್ದಾರೆ.