ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಜೆಟ್: ಆದಾಯ ತೆರಿಗೆ ಮಿತಿ 1.80 ಲಕ್ಷ ರೂಪಾಯಿಗಳಿಗೆ ಏರಿಕೆ (Union Budget | Income Tax exemption | Hike | Pranab Mukherjee)
PTI
ಪ್ರಸಕ್ತ ವರ್ಷದ(2011-12 ಸಾಲಿನ) ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 1.60 ಲಕ್ಷ ರೂಪಾಯಿಗಳಿಂದ 1.80ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

65 ವರ್ಷ ವಯಸ್ಸಿನ ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷಕ್ಕೆ ಇಳಿಕೆಗೊಳಿಸಲಾಗಿದ್ದು, ಆದಾಯ ತೆರಿಗೆ ಮಿತಿಯನ್ನು 2,40,000 ರೂಪಾಯಿಗಳಿಂದ 2,50,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಅತಿ ಹಿರಿಯ ನಾಗರಿಕರ (80 ವರ್ಷ ವಯಸ್ಸಿನ) ವಿಭಾಗವನ್ನು ಕೂಡಾ ಸೃಷ್ಟಿಸಲಾಗಿದ್ದು, ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಗಳವರೆಗೆ ನಿಗದಿಪಡಿಸಲಾಗಿದೆ. ಮಹಿಳಾ ಆದಾಯ ತೆರಿಗೆ ಮಿತಿಯಲ್ಲಿ (1,90,000 ರೂ) ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಮಹಿಳೆಯರ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸದಿರುವ ಹಿನ್ನೆಲೆಯಲ್ಲಿ, ಮಹಿಳಾ ವಿರೋಧಿ ಬಜೆಟ್ ಇದಾಗಿದೆ ಎಂದು ಮಹಿಳಾಮಣಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲಸೌಕರ್ಯ ಬಾಂಡ್‌ಗಳಲ್ಲಿ ಹೆಚ್ಚುವರಿ ಹೂಡಿಕೆ ಮಾಡುವ 20,000 ರೂಪಾಯಿಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದರಿಂದ, ವಾರ್ಷಿಕವಾಗಿ 2,000 ರೂಪಾಯಿಗಳ ತೆರಿಗೆ ಉಳಿತಾಯ ಮಾಡಬಹುದಾಗಿದೆ.

ವೈಯಕ್ತಿಕ ಆದಾಯ ತೆರಿಗೆ ಹಾಗೂ ಇತರ ತೆರಿಗೆಗಳು ಯಥಾ ರೀತಿ ಮುಂದುವರಿಯಲಿವೆ. ಆದಾಯ ತೆರಿಗೆ ಸಂಗ್ರಹ ವಿಧಾನವನ್ನು ಆಧುನಿಕ ಮತ್ತು ಸರಳ ಪಾವತಿ ಹಾಗೂ ಸುಲಭ ಸಂಗ್ರಹದ ಗುರಿಯನ್ನು ಹೊಂದಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಕಾರ್ಪೋರೇಟ್ ಕ್ಷೇತ್ರದ ಮೇಲ್ತೆರಿಗೆಯನ್ನು ಶೇ.7.5ರಿಂದ ಶೇ.5ಕ್ಕೆ ಇಳಿಕೆಗೊಳಿಸಲಾಗಿದೆ.ಆದರೆ ನೇರ ತೆರಿಗೆ ಸಂಗ್ರಹವನ್ನು ಶೇ.18ರಿಂದ ಶೇ.18.5ಕ್ಕೆ ಹೆಚ್ಚಳ ಪ್ರಕಟಿಸಿದ್ದಾರೆ.

ಪ್ರಸ್ತುತ ಶೇ.10ರಷ್ಟಿರುವ ಸೇವಾ ತೆರಿಗೆ ಹಾಗೂ ಅಬಕಾರಿ ತೆರಿಗೆಯನ್ನು ಹಿಂಪಡೆಯುವ ಯಾವುದೇ ಪ್ರಸ್ತಾವನೆಗಳಿಲ್ಲ. ಏತನ್ಮಧ್ಯೆ, ದೇಶಿಯ ಮತ್ತು ಅಂತಾರಾಷ್ಟ್ರೀಯ ಸೇವಾ ತೆರಿಗೆಯಲ್ಲಿ ಹೆಚ್ಚಳಗೊಳಿಸಲಾಗಿದೆ.

ಮುಂದಿನ ಆರ್ಥಿಕ ವರ್ಷದ ಅವಧಿಯಲ್ಲಿ ಕೃಷಿ ಸಾಲ ವಿತರಣೆಯನ್ನು 4.75 ಲಕ್ಷ ಕೋಟಿ ರೂಪಾಯಿಗಳ ಗುರಿಯನ್ನು ತಲುಪುವ ಪ್ರಸ್ತಾವನೆಯಿದೆ. ಕೇಂದ್ರ ಸರಕಾರ ಸಾಲಕ್ಕೆ ಶೇ.3ರಷ್ಟು ಬಡ್ಡಿ ದರದ ಲಾಭವನ್ನು ನೀಡಲಾಗಿದೆ. 15 ಮೆಗಾ ಫುಡ್ ಪಾರ್ಕ್‌ಗಳು ಮತ್ತು ನಾಲ್ಕು ಮಿಲಿಯನ್ ಟನ್ ಆಹಾರ ಧಾನ್ಯ ಸಂಗ್ರಹಾಲಯಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಸಮ್ಮತಿಸಲಾಗಿದೆ ಎಂದು ಹೇಳಿದ್ದಾರೆ.
ಇವನ್ನೂ ಓದಿ