ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಂಎನ್‌ಪಿ ಸೇವೆಯಲ್ಲಿ ವೋಡಾಫೋನ್‌ಗೆ ಅಗ್ರಸ್ಥಾನ (Mobile Number Portability | Vodafone | BSNL | Idea Cellular | Bharti Airtel)
ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೇವೆ ಜಾರಿಗೆ ಬಂದು ಒಂದು ತಿಂಗಳಾಗಿದೆ.ಒಂದು ತಿಂಗಳ ಅವಧಿಯಲ್ಲಿ 1.9 ಲಕ್ಷ ನೂತನ ಗ್ರಾಹಕರ ಸೇರ್ಪಡೆಯೊಂದಿಗೆ ವೋಡಾಫೋನ್ ಅಗ್ರಸ್ಥಾನದಲ್ಲಿದೆ. ಬಿಎಸ್‌ಎನ್‌ಎಲ್ ಸಂಸ್ಥೆ ಅತಿ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ.

ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೇವೆಗೆ ಸುಮಾರು 20 ಲಕ್ಷ ಮೊಬೈಲ್ ಗ್ರಾಹಕರು ಅರ್ಜಿಯನ್ನುಸಲ್ಲಿಸಿದ್ದಾರೆ ಎಂದು ಟೆಲಿಕಾಂ ಕಂಪೆನಿಯ ಮೂಲಗಳು ತಿಳಿಸಿವೆ.

ಎಂಎನ್‌ಪಿಯಿಂದಾಗಿ, ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸದೇ ಸೇವಾ ಆಪರೇಟರ್‌ಗಳನ್ನು ಬದಲಿಸಬಹುದಾಗಿದೆ.

ಮೊಬೈಲ್ ನಂಬರ್ ಪೋರ್ಟೆಬಿಲಿಟಿಗಾಗಿ ಇಲ್ಲಿಯವರೆಗೆ ಒಟ್ಟು 19,79,600 ಮೊಬೈಲ್ ಗ್ರಾಹಕರು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಟೆಲಿಕಾಂ ಇಲಾಖೆ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಹಿರಂಗಪಡಿಸಿದೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಜನೆವರಿ 20 ರಂದು ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ ಚಾಲನೆ ನೀಡಿದ್ದಾರೆ.ದೇಶದ ಖಾಸಗಿ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೋಡಾಫೋನ್ ಎಸ್ಸಾರ್, ಏರ್‌ಟೆಲ್ ಮತ್ತು ಐಡಿಯಾ ಸೆಲ್ಯುಲರ್ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಹಲವು ರೀತಿಯ ಕಸರತ್ತುಗಳನ್ನು ನಡೆಸಿವೆ.

ಇತ್ತೀಚಿನ ವರದಿಗಳ ಪ್ರಕಾರ, ವೋಡಾಫೋನ್ ಎಸ್ಸಾರ್ 1.9 ಲಕ್ಷ ಗ್ರಾಹಕರನ್ನು ಸೆಳೆದು ಅಗ್ರಸ್ಥಾನದಲ್ಲಿದೆ. ಐಡಿಯಾ ಸೆಲ್ಯುಲರ್ ಟೆಲಿಕಾಂ ಕಂಪೆನಿ 1.5 ಲಕ್ಷ ಗ್ರಾಹಕರನ್ನು ಸೆಳೆದು ಎರಡನೇ ಸ್ಥಾನದಲ್ಲಿದೆ.

ದೇಶದ ಖಾಸಗಿ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್, ಮೊಬೈಲ್ ನಂಬರ್ ಪೋರ್ಟೆಬಿಲಿಟಿಯಲ್ಲಿ 1.48 ಲಕ್ಷ ಮೊಬೈಲ್ ಗ್ರಾಹಕರನ್ನು ಸೆಳೆಯುವ ಮೂಲಕ ಮೂರನೇ ಸ್ಥಾನವನ್ನು ಪಡೆದಿದೆ.
ಇವನ್ನೂ ಓದಿ