ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣ ರವಾನೆಗೆ ಪತ್ನಿಯ ಖಾತೆ ಬಳಸಿಕೊಂಡ ಎ.ರಾಜಾ: ಸಿಬಿಐ (Bribe money | A Raja | 2G scam)
PTI
2ಜಿ ತರಂಗಾಂತರ ಹಂಚಿಕೆ ಅವ್ಯವಹಾರದ 3000 ಕೋಟಿ ರೂಪಾಯಿಗಳ ಲಂಚದ ಹಣವನ್ನು ಮಾರಿಷಿಯಸ್ ಮತ್ತು ಸೆಶಲ್ಸ್ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಮಾಜಿ ಟೆಲಿಕಾಂ ಖಾತೆ ಸಚಿವ ಎ.ರಾಜಾ, ಪತ್ನಿಯ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡಿರುವ ಸಾಕ್ಷಿಗಳು ಲಭ್ಯವಾಗಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಬಂದವರಿಗೆ ಆದ್ಯತೆ ಎನ್ನುವ ಟೆಲಿಕಾಂ ನಿಯಮದಡಿ, 2ಜಿ ತರಂಗಾಂತರ ಹಂಚಿಕೆಯಲ್ಲಿ ಭಾರಿ ಅವ್ಯವಹಾರವಾಗಿದೆ. ದ್ವೀಪ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಮಾಜಿ ಸಚಿವ ರಾಜಾ, ಪತ್ನಿಯ ಖಾತೆಯಲ್ಲಿ ಹಣ ಠೇವಣಿ ಮಾಡಿರುವ ದಾಖಲೆಗಳು ಲಭ್ಯವಾಗಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

2ಜಿ ತರಂಗಾಂತರ ಹಗರಣದಲ್ಲಿ ಮಾಜಿ ಸಚಿವ ರಾಜಾ 3000 ಕೋಟಿ ರೂಪಾಯಿಗಳ ಲಂಚವನ್ನು ಸ್ವೀಕರಿಸಿದ್ದು, ಸರಕಾರಕ್ಕೆ ಒಟ್ಟು 45,000-50,000 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2ಜಿ ತರಂಗಾಂತರ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಲಂಚದ ವಿದೇಶಿ ಬ್ಯಾಂಕ್‌ಗಳಿಗೆ ವರ್ಗಾಯಿಸಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, 10 ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಮಾಹಿತಿಯನ್ನು ಕೋರಲಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಈಗಾಗಲೇ, ಸಿಂಗಾಪೂರ್, ಮಾರಿಷಿಯಸ್, ಸೈಪ್ರಸ್, ದುಬೈ, ಮಾಸ್ಕೋ, ನಾರ್ವೆ ಇಸ್ಲೆ ಆಫ್ ಮ್ಯಾನ್, ಜೆರ್ಸಿ ಐಲ್ಯಾಂಡ್ ಮತ್ತು ಬ್ರಿಟನ್ ವರ್ಜಿನ್ ಐಲ್ಯಾಂಡ್ ರಾಷ್ಟ್ರಗಳಲ್ಲಿರುವ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ