ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಂಎನ್‌ಪಿ ರೇಸ್‌ನಲ್ಲಿ ವೋಡಾಫೋನ್ ಇಂಡಿಯಾಗೆ ಅಗ್ರಸ್ಥಾನ (Vodafone | MNP | race | Bharti Airtel | Reliance Communications | Idea Cellular)
ಎಂಎನ್‌ಪಿ ರೇಸ್‌ನಲ್ಲಿ ವೋಡಾಫೋನ್ ಇಂಡಿಯಾಗೆ ಅಗ್ರಸ್ಥಾನ
ನವದೆಹಲಿ, ಶನಿವಾರ, 19 ಮಾರ್ಚ್ 2011( 18:23 IST )
PTI
ಮೊಬೈಲ್ ನಂಬರ್ ಫೋರ್ಟೆಬಿಲಿಟಿ ರೇಸ್‌ನಲ್ಲಿ ವೋಡಾಫೋನ್ ಇಂಡಿಯಾ, ಇತರ ಖಾಸಗಿ ಚೆಲಿಕಾಂ ಕಂಪೆನಿಗಳನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಹರಿಯಾಣಾದಲ್ಲಿ ನವೆಂಬರ್ ತಿಂಗಳಲ್ಲಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಜನೆವರಿ 20 ರಿಂದ ದೇಶಾದ್ಯಂತ ವಿಸ್ತರಿಸಲಾಗಿತ್ತು. ಎಂಎನ್‌ಪಿಯಿಂದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುವುದಿಲ್ಲ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇನ್ ಆಫ್ ಇಂಡಿಯಾ(ಸಿಒಎಐ) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಒಎಐ ಪ್ರಕಾರ,ದೇಶದ ಒಟ್ಟು ಮೊಬೈಲ್ ಗ್ರಾಹಕರಲ್ಲಿ ಶೇ.1 ರಷ್ಟು ಅಥವಾ 5 ಮಿಲಿಯನ್ ಗ್ರಾಹಕರು ಮಾತ್ರ ಎಂಎನ್‌ಪಿ ಮೋಹಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದೆ.
ಭಾರತ ಟೆಲಿಕಾಂ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿರುವ ವೋಡಾಫೋನ್, 192,761 ಗ್ರಾಹಕರನ್ನು ಪಡೆದು ಅಗ್ರಸ್ಥಾನದಲ್ಲಿದೆ. ಐಡಿಯಾ ಸೆಲ್ಯೂಲರ್ 150,789 ಗ್ರಾಹಕರ ಸೇರ್ಪಡೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ದೇಶದ ಖಾಸಗಿ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್,148,215 ಗ್ರಾಹಕರ ಸೇರ್ಪಡೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಎಂಎನ್‌ಪಿಯಿಂದಾಗಿ ರಿಲಯನ್ಸ್ ಕಮ್ಯೂನಿಕೇಶನ್ಸ್ 306,417 ಗ್ರಾಹಕರನ್ನು ಕಳೆದುಕೊಂಡಿದೆ.