ನವದೆಹಲಿ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನಾಳೆ ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿದೆ. ವೇತನ ಹೆಚ್ಚಳದ ಬೇಡಿಕೆ ಕುರಿತಂತೆ ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಜೊತೆಗೆ ನಡೆದ ಮಾತುಕತೆ ಸಫಲವಾಗಿಲ್ಲ, ಆದ್ದರಿಂದ ಮುಷ್ಕರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಎಐಬಿಇಓ ಮುಖ್ಯಸ್ಥ ಸಿ.ಹೆಚ್.ವೆಂಕಟಾಚಲಮ್ ತಿಳಿಸಿದ್ದಾರೆ