ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಿದೇಶಿ ವಿನಿಮಯ
 
ದೇಶದ ವಿದೇಶಿ ವಿನಿಮಯ 204 ಬಿಲಿಯನ್‌ ಡಾಲರ್‌
webdunia
currency
PTI
ಭಾರತದ ವಿದೇಶವಿನಿಮಯ ಸಂಗ್ರಹ (ಫಾರೆಕ್ಸ್) ಮೊತ್ತವು 952 ದಶಲಕ್ಷ ಡಾಲರ್‌ ಆಗಿ ವೃದ್ಧಿಸಿದೆ. ಇದರೊಂದಿಗೆ ಮೇ ಮೂರನೇ ವಾರಾಂತ್ಯದ ಲೆಕ್ಕಾಚಾರದಂತೆ ಒಟ್ಟು ಸಂಗ್ರಹವು 204 ಬಿಲಿಯನ್‌ ಡಾಲರ್‌ ಆಗಿರುತ್ತದೆ.

ಮೇ ತಿಂಗಳ 18ರಂದು ಕೊನೆಗೊಂಡ ವಾರದ ಲೆಕ್ಕಾಚಾರದಂತೆ 2.3.982 ಬಿಲಿಯನ್‌ ಡಾಲರ್‌ನಷ್ಟಿತ್ತು. ಈ ಅವಧಿಯಲ್ಲಿ ವಿದೇಶ ವಿನಿಮಯ ಸಂಗ್ರಹವನ್ನು 9 ಮಿಲಿಯ ಡಾಲರ್‌ಗಳಿಗೆ ಕಡಿತಗೊಳಿಸಲಾಗಿತ್ತು.

ಭಾರತೀಯ ರಿಜರ್ವ್‌ ಬ್ಯಾಂಕ್‌( ಆರ್‌ಬಿಐ) ವರದಿ ತಿಳಿಸಿರುವಂತೆ ವಿದೇಶಿ ವಿನಿಮಯ ಸಂಗ್ರಹ ಆಸ್ತಿಯು ಪ್ರಸ್ತುತ ಒಂದು ವಾರದ ಅಂತರದಲ್ಲಿ 953 ದಶಲಕ್ಷ ರೂ.ಗಳಿಂದ 197.438 ಬಿಲಿಯನ್‌ ಡಾಲರ್‌ಗಳಿಗೆ ಏರಿಕೆಯಾಗಿತ್ತು. ವಿದೇಶಿ ವಿನಿಮಯ ಹೆಚ್ಚಳವು ಡಾಲರೇತರ ವಿನಿಮಯಗಳಾದ ಯೂರೊ,ಸ್ಟೆರ್ಲಿಂಗ್‌ ಇತ್ಯಾದಿಗಳ ದಾಸ್ತಾನು ಹೆಚ್ಚಳದ ಪ್ರಭಾವನ್ನೂ ಹೊಂದಿರುತ್ತದೆ.

ದೇಶದ ವಿದೇಶಿ ವಿನಿಮಯ ದಾಸ್ತಾನಿನಲ್ಲಿ 7.036 ಬಿಲಿಯನ್‌ ಡಾಲರ್ ಮೊಲ್ಯದ ಚಿನ್ನ, ಒಂದು ದಶಲಕ್ಷ ರೂ. ಮೊತ್ತದ ವಿಶೇಷ ನಗದೀಕರಣ ಹಕ್ಕುಗಳ ಆಸ್ತಿಯೂ ಇದೆ.