ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಅತಿಯಾಗಿ ಹರಿಯುತ್ತಿರುವ ವಿದೇಶಿ ಬಂಡವಾಳವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ನಾಗರಿಕರು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿ ಇಡಲು ಅನುಕೂಲವಾಗುವಂತೆ ತನ್ನ ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆಯಲ್ಲಿ ಬದಲಾವಣೆ ತಂದಿದೆ.
ವಿದೇಶಿ ಬ್ಯಾಂಕಗಳಲ್ಲಿ ಅದರಲ್ಲೂ ದೇಶದಿಂದ ಹೊರಗೆ ಇರುವ ಬ್ಯಾಂಕುಗಳಲ್ಲಿ 41 ಲಕ್ಷ ರೂಗಳವರೆಗೆ, ಒಂದು ವರ್ಷದ ಅವಧಿಯವರೆಗೆ ಭಾರತದ ಯಾವುದೇ ನಾಗರಿಕ ಠೇವಣಿ ಇಡಬಹುದು ಎಂದು ಹೇಳಿದೆ.
ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಪ್ಪಣೆ ಇಲ್ಲದೇ ಭಾರತೀಯ ನಾಗರಿಕ ವಿದೇಶಿ ಮುದ್ರಾಂಕದ ಬ್ಯಾಂಕ್ ಖಾತೆ ಮತ್ತು, ಠೇವಣಿಯನ್ನು ಇಡಬಹುದಾಗಿದೆ ಎಂದು ಲಿಬರಲೈಸಡ್ ರೆಮಿಟನ್ಸ್ ಸ್ಕೀಮ್ ಯೋಜನೆಯ ಸೌಲಭ್ಯಗಳ ಕುರಿತು ನೀಡಿದ ಪ್ರಕಟಣೆಯ ಸಮಯದಲ್ಲಿ ವಿದೇಶಿ ಮುದ್ರಾಂಕ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಇರುವ ಸೌಲಭ್ಯದ ಬಗ್ಗೆ ಹೇಳಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ದರ ದಿನದಿಂದ ಏರಿಕೆಯಾಗುತ್ತಿದೆ. ರೂಪಾಯಿ ಮೌಲ್ಯದ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡ ವಿದೇಶಿ ವಾಣಿಜ್ಯ ಸಾಲಗಳಿಗೆ ನಿಯಂತ್ರಣ ವಿಧಿಸುವುದಕ್ಕೆ ಮುಂದಾಗಿದೆ.
ವಿದೇಶಿ ಬ್ಯಾಂಕ್‌ಗಳಲ್ಲಿ ಠೇವಣಿ, ಮ್ಯುಚುವಲ್ ಫಂಡ್, ಮತ್ತು ವೆಂಚುರ್ ಫಂಡ್, ಇಲ್ಲವೇ ಪ್ರಾಮಿಸರಿ ನೋಟ್‌ಗಳಲ್ಲಿ ತಮ್ಮಲ್ಲಿನ ಹಣವನ್ನು ಹೂಡಲು ನಾಗರಿಕರಿಗೆ ರಿಜರ್ವ್ ಬ್ಯಾಂಕ್ ಸಲಹೆ ನೀಡಿದೆ. ಕೇಂದ್ರ ಸರಕಾರವು ಕೂಡ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿರುವ ವಿದೇಶಿ ವಿನಿಮಯ.ರೂಪಾಯಿ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗಿದ್ದು, ಆದ್ದರಿಂದ ಕಾರ್ಪೋರೆಟ್ ವಲಯ ಮತ್ತು ಖಾಸಗಿ ವ್ಯಕ್ತಿಗಳು ವಿದೇಶದಲ್ಲಿ ಹಣ ಹೂಡಲು ಮುಂದಾದಬೇಕು ಎಂದು ಸಲಹೆ ನೀಡಿದೆ.
ರೂಪಾಯಿ ಮೌಲ್ಯದಲ್ಲಿನ ಹೆಚ್ಚಳ ಸಾಪ್ಟವೇರ್ ಕಂಪನಿಗಳ ರಪ್ತು ವ್ಯಾಪಾರಕ್ಕೆ ಭಾರಿ ಹೊಡೆತ ನೀಡುವ ಸಾದ್ಯತೆ ಇರುವುದರಿಂದ ಸಾಪ್ಟವೇರ್ ಕಂಪನಿಗಳು ಕೂಡ ರೂಪಾಯಿ ಮೌಲ್ಯ ನಿಯಂತ್ರಣಕ್ಕೆ ತರಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿವೆ.
|