ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ವಿದೇಶಿ ವಿನಿಮಯ: ರೂಪಾಯಿ ಮೌಲ್ಯ ಕುಸಿತ
ರೂಪಾಯಿ ಮೌಲ್ಯದಲ್ಲಿ ಕುಸಿತ
WDWD
ಬ್ಯಾಂಕ್ ಮತ್ತು ತೈಲ ಸಂಸ್ಕರಣೆ ಘಟಕಗಳು, ಮಂಗಳವಾರದ ಬೆಳಗಿನ ವಿದೇಶಿ ಮುದ್ರಾಂಕ ವಹಿವಾಟಿನಲ್ಲಿ ಡಾಲರ್ ಖರಿದಿಗೆ ಮುಂದಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಗೊಂಡಿದೆ.

ಅಂತರಿಕ ಬ್ಯಾಂಕ್, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ಪ್ರಾರಂಭಿಕ ವಹಿವಾಟಿನಲ್ಲಿ ಪ್ರತಿ ಡಾಲರ್ ಮೌಲ್ಯ 40.64/66 ರೂ. ಪೈಸೆಗೆ ತಲುಪಿದೆ. ಸೋಮವಾರ ಮುಕ್ತಾಯಗೊಂಡ ವಹಿವಾಟಿನಲ್ಲಿ ಡಾಲರ್ ಬೆಲೆ 40.6250/6350 ಇತ್ತು. ಸೋಮವಾರದ ಪ್ರಾರಂಭಿಕ ವಿದೇಶಿ ವಿನಿಮಯ ದರ 40.6650/6750 ರೂ. ಪೈಸೆ ಇದ್ದುದು, ಡಾಲರ್ ಖರಿದಿ ಚುರುಕುಗೊಂಡ ಪರಿಣಾಮವಾಗಿ ರೂಪಾಯಿ ಬೆಲೆ ದಿನದ ಅಂತ್ಯದಲ್ಲಿ ಕುಸಿತ ಕಂಡಿತ್ತು.
.
ರಪ್ತುದಾರರ ಅನುಪಸ್ಥಿತಿಯಲ್ಲಿ ಬ್ಯಾಂಕ್ ಮತ್ತು ತೈಲ ಸಂಸ್ಕರಣೆ ಘಟಕಗಳು ನಿರಂತರವಾಗಿ ಎರಡನೆ ದಿನವೂ ಡಾಲರ್ ಖರಿದಿಗೆ ಮುಂದಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಏರುಪೇರು ಉಂಟಾಗಿದೆ. ಭಾರತದಲ್ಲಿನ ಇಂಧನ ಬೇಡಿಕೆಯ ಶೇ 70ರಷ್ಟನ್ನು ಆಮದು ಮೂಲಕ ಪೂರೈಸಿಕೊಳ್ಳುತ್ತಿದೆ.

ಎರಡು ದಿನಗಳ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಭಾರತೀಯ ನಾಗರಿಕರು ವಿದೇಶಗಳಲ್ಲಿ ಬ್ಯಾಂಕ್ ಠೇವಣಿ ಇಡಬಹುದು ಎಂದು ಹೇಳಿದ್ದರಿಂದ ಬ್ಯಾಂಕಿಂಗ್ ವಲಯ ಕೂಡ ಡಾಲರ್ ಖರಿದಿಗೆ ಮುಂದಾಗಿದ್ದು, ಪರಿಣಾಮವಾಗಿ ಭಾರತೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.
ಮತ್ತಷ್ಟು
ಬಂಡವಾಳ ನಿಯಂತ್ರಣಕ್ಕೆ ಆರ್ ಬಿ ಐ ಕ್ರಮ
ರೂಪಾಯಿ ಮೌಲ್ಯ ಮತ್ತೆ ಕುಸಿತ
ಡಾಲರ್ ಎದುರು ರೂಪಾಯಿ ದರ ಕುಸಿತ
ದೇಶದ ವಿದೇಶಿ ವಿನಿಮಯ 204 ಬಿಲಿಯನ್‌ ಡಾಲರ್‌
ದಶಕದ ಅವಧಿಯಲ್ಲಿ ಡಾಲರ್ ಮೌಲ್ಯ ಕುಸಿತ