ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ವಿದೇಶಿ ವಿನಿಮಯ: ಕುಸಿಯುತ್ತಿರುವ ರೂ ಮೌಲ್ಯ
ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ವಿದೇಶಿ ವಿನಿಮಯದ ಮೇಲೆ ಪರಿಣಾಮ ಬೀರಿದ್ದು, ಶುಕ್ರವಾರದಂದು ನಡೆದ ಪ್ರಾರಂಭಿಕ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 41.70 ರೂ ಪೈಸೆಗಳಿಗೆ ಕುಸಿದಿದೆ. ಇಂದಿನ ರೂಪಾಯಿ ಮೌಲ್ಯ ನಾಲ್ಕು ತಿಂಗಳ ಹಿಂದೆ ಇತ್ತು.

ಗುರುವಾರ ನಡೆದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ತನ್ನ ವಿನಿಮಯ ಮೌಲ್ಯವನ್ನು 41.58/60 ರೂ ಪೈಸೆಗಳಿಗೆ ತನ್ನ ಮೌಲ್ಯವನ್ನು ಕಾಯ್ದುಕೊಂಡು ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ಶುಕ್ರವಾರದ ಪ್ರಾರಂಭಿಕ ವಿದೇಶಿ ವಿನಿಮಯ ವ್ಯವಹಾರದಲ್ಲಿ ರೂಪಾಯಿ ತನ್ನ ಮೌಲ್ಯವನ್ನು ತೀಕ್ಷ್ಮವಾಗಿ ಕಳೆದುಕೊಂಡು 41.36/37 ರೂ ಪೈಸೆಗಳಿಗೆ ತಲುಪಿದೆ.

ಕೆಲಕಾಲ ತೀಕ್ಷ್ಮವಾಗಿ ಕುಸಿತ ಅನುಭವಿಸಿದ ರೂಪಾಯಿ ನಂತರದ ಅವಧಿಯ ವಹಿವಾಟಿನಲ್ಲಿ ಚೇತರಿಕೆ ತೋರಿಸಿದ್ದು, ಮೊದಲ ಅವಧಿಯ ವಹಿವಾಟು ಅಂತ್ಯವಾಗುವ ಸಮಯಕ್ಕೆ 41.60/61 ರೂಗಳಿಗೆ ಡಾಲರ್ ಖರಿದಿಯಾಗುತ್ತಿತ್ತು.

ಜಾಗತೀಕ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಜಪಾನ್ ಯೆನ್ ಕೂಡ ಡಾಲರ್ ಎದುರು ತನ್ನ ಮೌಲ್ಯವನ್ನು ಕಳೆದುಕೊಂಡಿದೆ.ಯೆನ್ ಮೌಲ್ಯದ ಕುಸಿತಕ್ಕೆ ವಿದೇಶಿ ವಿನಿಮಯ ವ್ಯವಹಾರದಲ್ಲಿ ಯೆನ್ ನಿರಿಕ್ಷೆಯ ಲಾಭ ತರುತ್ತಿಲ್ಲ ಎಂದು ವಿದೇಶಿ ವಿನಿಮಯ ದಲ್ಲಾಳಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಡಿಮೆ ಬಡ್ಡಿದರದಲ್ಲಿ ನಿರಿಕ್ಷೆ ಮೀರಿದ ಲಾಭಗಳಿಸುವ ದೃಷ್ಟಿಯಿಂದ ಬಂಡವಾಳ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ರೂಪಾಯಿಯನ್ನು ಅಂತಾರಾಷ್ಟ್ರೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ತೊಡಗಿಸಿದ್ದರಿಂದ ಮತ್ತು ಏಷ್ಯಾದ ಪ್ರಮುಖ ಮುದ್ರಾಂಕ ಯೆನ್ ಮೌಲ್ಯದಲ್ಲಿ ಕುಸಿತ ಉಂಟಾಗಿದ್ದರಿಂದ ರೂಪಾಯಿ ಕೂಡ ಡಾಲರ್ ಎದುರು ತನ್ನ ಮೌಲ್ಯ ಕಳೆದುಕೊಳ್ಳುವಂತಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ವಿದೇಶಿ ಹೂಡಿಕೆದಾರರು ಅಗಸ್ಟ್ 10 ರಿಂದ ದಿ 14ರ ವರೆಗಿನ ಅವಧಿಯಲ್ಲಿ ಸುಮಾರು 261 ಮಿಲಿಯನ್ ಡಾಲರ್ ಬಂಡವಾಳವನ್ನು ಭಾರತೀಯ ಬಂಡವಾಳ ಕ್ಷೇತ್ರದಿಂದ ಹಿಂತೆಗೆದ ನಂತರ ಗುರುವಾರ ಒಂದೇ ದಿನದ ಅವಧಿಯಲ್ಲಿ 700 ಮಿಲಿಯನ್ ಡಾಲರ್ ಬಂಡವಾಳ ಕ್ಷೇತ್ರ ಕಳೆದುಕೊಂಡಿದೆ.
ಮತ್ತಷ್ಟು
ವಿದೇಶಿ ವಿನಿಮಯ: ರೂಪಾಯಿ ಮೌಲ್ಯ ಕುಸಿತ
ಬಂಡವಾಳ ನಿಯಂತ್ರಣಕ್ಕೆ ಆರ್ ಬಿ ಐ ಕ್ರಮ
ರೂಪಾಯಿ ಮೌಲ್ಯ ಮತ್ತೆ ಕುಸಿತ
ಡಾಲರ್ ಎದುರು ರೂಪಾಯಿ ದರ ಕುಸಿತ
ದೇಶದ ವಿದೇಶಿ ವಿನಿಮಯ 204 ಬಿಲಿಯನ್‌ ಡಾಲರ್‌
ದಶಕದ ಅವಧಿಯಲ್ಲಿ ಡಾಲರ್ ಮೌಲ್ಯ ಕುಸಿತ