ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮೊದಲು ಡಾಲರ್ ವಿರುದ್ಧ ನಡೆದ ವಹಿವಾಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ರೂಪಾಯಿ, ನಂತರದ ವಹಿವಾಟಿನಲ್ಲಿ ತೈಲ ಸಂಸ್ಕರಣಾ ಕಂಪನಿಗಳು ಡಾಲರ್ ಖರೀದಿಗೆ ಮುಂದಾಗಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಉಂಟಾಯಿತು.
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವ್ಯವಹಾರದಲ್ಲಿ ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯ 40.85/87 ಕ್ಕೆ ತಲುಪಿತು. ಶುಕ್ರವಾರ ನಡೆದ ವಹಿವಾಟಿನಲ್ಲಿ ಪ್ರತಿ ಡಾಲರ್ ಬೆಲೆ 40.8750/885 ಇತ್ತು. ಇಂದು ತೈಲ ಸಂಸ್ಕರಣಾ ಕಂಪನಿಗಳು ಡಾಲರ್ ಖರೀದಿಗೆ ಮುಂದಾದ ನಂತರ ಡಾಲರ್ ಬೆಲೆ 40.90/91 ಕ್ಕೆ ತಲುಪಿತು.
ಹಣದುಬ್ಬರದ ಪ್ರಮಾಣದಲ್ಲಿ ಇಳಿಕೆ ಮತ್ತು ಆರ್ಥಿಕಾಭಿವೃದ್ದಿ ರೂಪಾಯಿ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗಿತ್ತು ಎಂದು ವಿದೇಶಿ ವಿನಿಮಯ ದಲ್ಲಾಳಿಗಳು ಆರಂಭದಲ್ಲಿನ ರೂಪಾಯಿ ಮೌಲ್ಯದ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ.
|